ಕರ್ನಾಟಕ

karnataka

ETV Bharat / city

ಕೊರೊನಾ ಪರೀಕ್ಷೆ ವರದಿ ವಿಳಂಬ; ತ್ವರಿತ ಚಟುವಟಿಕೆಗೆ ಅಡ್ಡಿ - ಬೆಂಗಳೂರಿನಲ್ಲಿ ಕೊರೊನಾ ಸೋಂಕು

ಕೊರೊನಾ ಪರೀಕ್ಷೆ ವರದಿ ತಡವಾಗಿ ಬರುತ್ತಿರುವುದರಿಂದ ಪಾಸಿಟಿವ್ ಹಾಗೂ ಕ್ವಾರಂಟೈನ್​ ಶಂಕಿತರನ್ನು ಗುರುತಿಸುವ ಕೆಲಸ ವಿಳಂಬವಾಗುತ್ತಿದೆ. ಇದರಿಂದ ತ್ವರಿತಗತಿಯ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊರೊನಾ ಸೋಂಕಿನ ಪರೀಕ್ಷಾ ವರದಿ ವಿಳಂಬ

By

Published : May 1, 2020, 11:00 PM IST

ಬೆಂಗಳೂರು: ನಗರದ ಯಾವುದೇ ವಾರ್ಡ್​ನಲ್ಲಿ ಇಂದು ಕೊರೊನಾ ಪಾಸಿಟಿವ್ ಕಂಡು ಬಂದಿಲ್ಲ. ಹೀಗೆಂದ ಮಾತ್ರಕ್ಕೆ ಕೊರೊನಾ ಸೋಂಕಿತರು ಇಲ್ಲ ಎಂದಲ್ಲ. ಪರೀಕ್ಷಾ ವರದಿಗಳ ವಿಳಂಬದಿಂದ ಈ ರೀತಿಯ ಉತ್ತರ ಬರುತ್ತಿದೆ.

ಕೊರೊನಾ ಸೋಂಕಿನ ಪರೀಕ್ಷಾ ವರದಿ ವಿಳಂಬ

ಇದು ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ಹೊಸ ತಲೆ ನೋವಾಗಿ ಪರಿಣಮಿಸಿದೆ. ಒಂದು ದಿನ ಪ್ರಕರಣಳು ಕಂಡು ಬಂದಿರುವುದಿಲ್ಲ. ಮರುದಿನವೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್​​ ಹೆಚ್ಚಳವಾಗುತ್ತಿದೆ.

ಸತತ ಒಂದು ವಾರ ಯಾವುದೇ ಪ್ರಕರಣ ದಾಖಲಾಗದೇ ಇದ್ದರೆ ಮಾತ್ರ ನಿರಾಳವಾಗಲು ಸಾಧ್ಯ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಂಟೈನ್ಮೆಂಟ್ ಝೋನ್​ಗಳಾದ ಬೊಮ್ಮಸಂದ್ರ, ಪಾದರಾಯನಪುರದಲ್ಲಿ ಸಾಕಷ್ಟು ಜನ ಕ್ವಾರಂಟೈನ್​ನಲ್ಲಿ ಇದ್ದಾರೆ. ಇವರ ಆರೋಗ್ಯ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ವರದಿ ಬರಲು 24 ಗಂಟೆ ಅಥವಾ ಎರಡು ದಿನ ಸಮಯ ತೆಗೆದುಕೊಳ್ಳುತ್ತಿರುವುದರಿಂದ ಹಿನ್ನಡೆಯಾಗುತ್ತಿದೆ ಎಂದರು.

ಪ್ರತಿದಿನ ವರದಿ ಬಂದರೆ ಪಾಲಿಕೆಯ ಕ್ವಾರಂಟೈನ್ ಕಾರ್ಯಾಚರಣೆ, ಬಿಡುಗಡೆ ಎಲ್ಲವೂ ತ್ವರಿತವಾಗಿ ಮಾಡಲು ಸಾಧ್ಯವಾಗುತ್ತದೆ. ಕೊರೊನಾ ಪಾಸಿಟಿವ್ ಇದ್ದರೆ, ಒಂದೇ ದಿನದಲ್ಲಿ ಗೊತ್ತಾಗಲಿದೆ. ಆದರೆ, ಪರೀಕ್ಷಾ ವರದಿ ಬರಲು ಸಮಯ ತೆಗೆದುಕೊಳ್ಳುತ್ತದೆ.

ABOUT THE AUTHOR

...view details