ದೇವನಹಳ್ಳಿ:ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಕಟ್ಟೆಚ್ಚರ ವಹಿಸಿದೆ. ಈ ನಿಟ್ಟಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ತೀವ್ರ ನಿಗಾ ವಹಿಸಲಾಗಿದೆ. ವಿದೇಶದಿಂದ ಆಗಮಿಸಿದ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮತ್ತು ಸ್ಟ್ಯಾಂಪಿಂಗ್ ಮಾಡುವ ಮೂಲಕ ಕೊರೊನಾ ತಡೆಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ.
ವಿದೇಶದಿಂದ ಬರುವ ಪ್ರಯಾಣಿಕರನ್ನ A, B, C ಗ್ರೇಡ್ ನೀಡಿ ವರ್ಗೀಕರಣ ಮಾಡಲಾಗುತ್ತಿದೆ. ಕೊರೊನಾ ಶಂಕಿತರನ್ನ A ವರ್ಗಕ್ಕೆ, 60 ವರ್ಷ ಮೇಲ್ಪಟ್ಟವರನ್ನ ಪ್ರತ್ಯೇಕಿಸಿ ಅವರಿಗೆ ಬಿಪಿ, ಶುಗರ್, ಅಸ್ತಮಾ ಇದ್ದಲ್ಲಿ ಅಂತವರನ್ನು B ವರ್ಗಕ್ಕೆ ಸೇರಿಸಲಾಗುತ್ತಿದೆ. ಇನ್ನುಳಿದ ಪ್ರಯಾಣಿಕರನ್ನ C ಕೆಟಗರಿಗೆ ಸೇರಿಸಲಾಗಿದೆ. A ಮತ್ತು B ವರ್ಗದ ಪ್ರಯಾಣಿಕರನ್ನ ವಿಮಾನ ನಿಲ್ದಾಣದಿಂದ ನೇರವಾಗಿ ದೇವನಹಳ್ಳಿಯ ಆಕಾಶ್ ಹಾಸ್ಪಿಟಲ್ಗೆ ಕಳುಹಿಸಿ ತಪಾಸಣೆಗೆ ಒಳಪಡಿಸಲಾಗುತ್ತಿದೆ.