ಕರ್ನಾಟಕ

karnataka

By

Published : May 2, 2020, 6:58 PM IST

ETV Bharat / city

ಯಾವ್ಯಾವ ಜಿಲ್ಲೆ? ಯಾವ್ಯಾವ ಝೋನ್​..? ಇಲ್ಲಿದೆ ರಾಜ್ಯ ಸರ್ಕಾರದ ಪಟ್ಟಿ

ರಾಜ್ಯ ಸರ್ಕಾರ ಲಾಕ್​ಡೌನ್​ ನಿಯಮಗಳನ್ನು ಪಾಲನೆ ಮಾಡಲು ಹಾಗೂ ಕೊರೊನಾ ವೈರಸ್ ಹರಡದಂತೆ ತಡೆಯಲು ಜಿಲ್ಲೆಗಳಿಗೆ ಅನುಸಾರವಾಗಿ ಝೋನ್​ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

karnataka govt. zones
ರಾಜ್ಯ ಸರ್ಕಾರದ ಝೋನ್​ಗಳು

ಬೆಂಗಳೂರು: ಲಾಕ್​ಡೌನ್​ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಆಧರಿಸಿ ರಾಜ್ಯ ಸರ್ಕಾರ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳನ್ನು ಘೋಷಣೆ ಮಾಡಿದೆ. ಇದಕ್ಕೂ ಮೊದಲು ಕೇಂದ್ರ ಸರ್ಕಾರ ಈ ವಲಯಗಳನ್ನು ಘೋಷಣೆ ಮಾಡಿದ್ದು ಈ ವಲಯಗಳನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿದೆ.

ರಾಜ್ಯ ಸರ್ಕಾರ ಘೋಷಿಸಿರುವ ರೆಡ್​ಝೋನ್​ನಲ್ಲಿ ಬೆಂಗಳೂರು ನಗರ, ಮೈಸೂರು, ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಮಂಡ್ಯ, ಬೀದರ್​, ದಕ್ಷಿಣ ಕನ್ನಡ, ಬಳ್ಳಾರಿ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ತುಮಕೂರು, ದಾವಣಗೆರೆ ಜಿಲ್ಲೆಗಳಿವೆ.

ರಾಜ್ಯ ಸರ್ಕಾರದ ಝೋನ್​ಗಳು

ಆರೆಂಜ್​ ಝೋನ್​ನಲ್ಲಿ ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿವೆ. ಇನ್ನು ಗ್ರೀನ್​ ಝೋನ್​ನಲ್ಲಿ ಯಾದಗಿರಿ, ರಾಮನಗರ, ರಾಯಚೂರು, ಕೊಪ್ಪಳ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಚಿತ್ರದುರ್ಗ, ಶಿವಮೊಗ್ಗ, ಚಾಮರಾಜನಗರ, ಹಾವೇರಿ ಜಿಲ್ಲೆಗಳಿವೆ.

ABOUT THE AUTHOR

...view details