ಬೆಂಗಳೂರು: ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವಾರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿದ್ದು, ಸರ್ಕಾರಿ ಅಧಿಕಾರಿ - ನೌಕರರು ನಾಳೆಯ ದಿನ ರಜೆಯಲ್ಲಿದ್ದರೂ, ಕರೆದಾಗ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು ಎಂದು ಪಾಲಿಕೆ ವಿಶೇಷ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬಿಬಿಎಂಪಿ ಅಧಿಕಾರಿ - ನೌಕರರಿಗೆ ನಗರ ಬಿಟ್ಟು ತೆರಳದಂತೆ ಆದೇಶ... - ಬಿಬಿಎಂಪಿ (ಆಡಳಿತ ವಿಭಾಗ) ವಿಶೇಷ ಆಯುಕ್ತ ಅನ್ಬುಕುಮಾರ್
ಅಧಿಕಾರಿಗಳು ಹಾಗೂ ನೌಕರರು ತಮ್ಮ ಮೊಬೈಲ್ ದೂರವಾಣಿ ಸಂಖ್ಯೆ ಚಾಲ್ತಿಯಲ್ಲಿಡಬೇಕು. ತುರ್ತು ಸಂದರ್ಭದಲ್ಲಿ ಕೆಲಸಕ್ಕೆ ಹಾಜರಾಗಬೇಕು ಎಂದು ನಿರ್ದೇಶನ ನೀಡಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಬಿಬಿಎಂಪಿ
ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ದೇಶಾದ್ಯಂತ ಭಾನುವಾರ 'ಜನತಾ ಕರ್ಫ್ಯೂ'ಗೆ ಕರೆ ಕೊಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು, ನೌಕರರ ಸೇವೆ ಯಾವ ಸಂದರ್ಭದಲ್ಲಾದರೂ ಅಗತ್ಯವಾಗಿದೆ. ಹೀಗಾಗಿ ಲಿಖಿತ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನದಿಂದ ಎಲ್ಲಿಯೂ ಹೋಗಬಾರದು ಎಂದು ಬಿಬಿಎಂಪಿ (ಆಡಳಿತ ವಿಭಾಗ) ವಿಶೇಷ ಆಯುಕ್ತ ಅನ್ಬುಕುಮಾರ್ ಆದೇಶ ಮಾಡಿದ್ದಾರೆ.