ಕರ್ನಾಟಕ

karnataka

ETV Bharat / city

ಸೋಂಕು ತಗಲದಂತೆ ಮಾಡುವುದೇ ಕೊರೊನಾ ಮದ್ದು...! ಅದು ಹೇಗೆ? - ಕೊರೊನಾ ವೈರಸ್​​ಗೆ ಕಡಿವಾಣ

ರಾಜ್ಯದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದರೆ ದೇವರೆ ಗತಿ. ಅವಶ್ಯ ಬಿದ್ದರೆ ಅಗತ್ಯವಿದ್ದಷ್ಟು ವೆಂಟಿಲೇಟರ್ ವ್ಯವಸ್ಥೆ ರೆಡಿ ಇಲ್ಲ. ಇಷ್ಟೆಲ್ಲ ಮಾಹಿತಿ ನೀಡುತ್ತಿರುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದಷ್ಟೇ. ನಿಮಗೆ ಭಯಪಡಿಸುವ ಉದ್ದೇಶದಿಂದಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

corona-virus-awareness
ಕೊರೊನಾ

By

Published : Mar 20, 2020, 4:38 PM IST

ಬೆಂಗಳೂರು: ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಸದ್ಯ ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಆದರೆ, ಕೊರೊನಾ ಬಾರದಂತೆ ತಡೆಯುವುದಕ್ಕೆ ಕೊರೊನಾವೇ ಮದ್ದು. ಹೌದು, ಇದುವರೆಗೂ ವೈರಸ್​​​ಗೆ ಕಡಿವಾಣ ಹಾಕಲು ನಿರ್ದಿಷ್ಟ ಔಷಧವನ್ನ ಯಾರೂ ಕಂಡುಹಿಡಿದಿಲ್ಲ. ಹಾಗಾದರೆ, ಕೊರೊನಾ ವೈರಸ್​ ಅನ್ನು ಹೇಗೆ ನೀವೇ ಮದ್ದಾಗಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತಾ? ಮನೆಯಲ್ಲಿಯಿರಿ, ಹೊರಗೆ ಬರಬೇಡಿ ಎಂದು ಏಕೆ ಹೇಳಲಾಗುತ್ತಿದೆ ಎಂಬ ಸಣ್ಣ ಆಲೋಚನೆ ಮಾಡಿದ್ದೀರಾ? ಇದಕ್ಕೆ ಉತ್ತರ ಇಲ್ಲಿದೆ ನೋಡಿ...

ಕೊರೊನಾ ವೈರಸ್ ಹರಡದಂತೆ ತಡೆಗೆ ನೀವು ಸಹಕಾರ ನೀಡದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಕೊರೊನಾ ಬಂದವರೆಲ್ಲರೂ ಸಾಯುವುದಿಲ್ಲ. ಆದರೆ, ಅದಕ್ಕೆ ಚಿಕಿತ್ಸೆ ನೀಡುವುದೇ ಸವಾಲಿನ ಕೆಲಸ ಎನ್ನುತ್ತಾರೆ ತಜ್ಞರು. ಒಂದು ವೇಳೆ ಬೆಂಗಳೂರಿನ ಜನಸಂಖ್ಯೆ ಶೇ.1ರಷ್ಟು ಮಂದಿಗೆ ಸೋಂಕು ತಗುಲಿದರೆ, ಚಿಕಿತ್ಸೆ ಒದಗಿಸುವುದು ಸಮಸ್ಯೆ ಉದ್ಭವಿಸುವುದು ಖಂಡಿತ.

ಏಕೆಂದರೆ ಬೆಂಗಳೂರಿನ ಜನಸಂಖ್ಯೆ 1.30 ಕೋಟಿ ಇದೆ. ಇದರಲ್ಲಿ ಶೇ.1ರಷ್ಟು ಸೋಂಕು ತಗುಲಿದರೆ 1.30 ಲಕ್ಷ ಸೋಂಕಿತರಾಗ್ತಾರೆ. ಇದರಲ್ಲಿ ಶೇ.10 ರಷ್ಟು ಅಂದರೆ 13 ಸಾವಿರ ಸೋಂಕಿತರಾಗುತ್ತಾರೆ. ಆದರೆ, ಇದರಲ್ಲಿರುವ ಶೇ.10ರಷ್ಟು ಸೋಂಕಿತರಿಗೂ ವೆಂಟಿಲೇಟರ್ ಒದಗಿಸಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಇರುವುದು ಕೇವಲ 700 ವೆಂಟಿಲೇಟರ್.

ಈ ವೆಂಟಿಲೇಟರ್​ಗಳಲ್ಲಿ ಈಗಾಗಲೇ ಬೇರೆ ಬೇರೆ ಆರೋಗ್ಯ ಸಮಸ್ಯೆ ಇರುವ ರೋಗಿಗಳಿಗೆ ಬಳಕೆ‌ ಮಾಡಲಾಗ್ತಿದೆ. ಹೀಗಿರುವಾಗ ಕೊರೊನಾಗೆ ಎಂದು ಬಳಕೆ ಮಾಡಲು ಸಿಗುವುದು ಶೇ.10-20 ಎಷ್ಟು ಅಷ್ಟೆ. 13 ಸಾವಿರ ಮಂದಿಗೆ ಕೊರೊನಾ ಬಂದರೂ ವೆಂಟಿಲೇಟರ್ ಒದಗಿಸುವುದು ಕಷ್ಟ. ಹೀಗಾಗಿ, ಏಕೆ ಆರೋಗ್ಯ ಇಲಾಖೆಯು ಎಚ್ಚರಿಸುತ್ತಿದೆ ಅನ್ನೋದನ್ನ ಗಮನದಲ್ಲಿಟ್ಟುಕೊಳ್ಳಬೇಕು. ಆದಷ್ಟು ಮನೆಯಲ್ಲಿ, ಸುರಕ್ಷಿತವಾಗಿರಿ ಅನ್ನೋದೇ ನಮ್ಮ ಆಶಯ.

ಒಂದು ವೇಳೆ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾದರೆ ರಾಜ್ಯಕ್ಕೆ ಕಂಟಕ ಗ್ಯಾರಂಟಿ. ಸಾವಿರ ರೋಗಿಗಳಿಗೂ ರಾಜ್ಯದಲ್ಲಿರುವ ವೆಂಟಿಲೇಟರ್​​ಗಳು ಸಾಲುವುದಿಲ್ಲ. ಯೂರೋಪ್ ರಾಷ್ಟ್ರಗಳು ಈಗಾಗಲೇ 15 ಸಾವಿರದಷ್ಟು ವೆಂಟಿಲೇಟರ್​​ಗಳನ್ನ ಕಾಯ್ದಿರಿಸಿವೆ. ಇದೀಗ ಹೊರ ದೇಶಗಳಿಂದ ಆಮದಿಗೆ ಬ್ರೇಕ್ ಬಿದ್ದಿದೆ. ಹೀಗಾಗಿ ಜಾಗೃತಿ ಮೂಡಿಸಲಾಗುತ್ತದೆ. ಯಾರೂ ಅಂಜಿಕೆ ಪಡಬಾರದು.

ABOUT THE AUTHOR

...view details