ಬೆಂಗಳೂರು :ಈಗಾಗಲೇ ಮೊದಲ ಹಂತದಲ್ಲಿ ಕೋವಿಡ್ ವ್ಯಾಕ್ಸಿನೇಷನ್‌ನ ಪೌರ ಕಾರ್ಮಿಕರಿಗೆ ನೀಡಲಾಗಿದೆ. ಇಂದಿನಿಂದ ಎರಡನೇ ಲಸಿಕಾ ಅಭಿಯಾನ ನಡೆಯುತ್ತಿದೆ. ಆದರೆ, ವ್ಯಾಕ್ಸಿನ್ ಹಾಕಿಸಿಕೊಳ್ಳಲು ಕೆಲ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದು, 8,02,101 ಗುರಿ ಹೊಂದಿರುವ ಇಲಾಖೆಯಲ್ಲಿ ಈವರೆಗೆ 3,81,555 ಲಸಿಕೆ ಪಡೆದುಕೊಂಡಿದ್ದಾರೆ.
ಲಸಿಕೆ ಪಡೆಯಲು ವಾರಿಯರ್ಸ್ ಹಿಂಜರಿಯುತ್ತಿದ್ದಾರಾ ಎಂಬ ಪ್ರಶ್ನೆಗೆ ಡಿಸಿಎಂ ಅಶ್ವತ್ಥ್ ನಾರಾಯಣ ಪ್ರತಿಕ್ರಿಯಿಸಿದ್ದು, ನಾವು ಕೋವಿಡ್ ಲಸಿಕೆಯನ್ನ ಯಾರಿಗೂ ಮ್ಯಾಂಡೇಟರಿ ಮಾಡಿಲ್ಲ. ವಾಲೆಂಟರಿಯಾಗಿ ಬಂದು ಪಡೆಯಬಹುದು. ಸೋಂಕಿತರಾಗಿದ್ದವರು ಲಸಿಕೆ ವಿಚಾರದಲ್ಲಿ ಗೊಂದಲಕ್ಕೊಳಗಾಗಿದ್ದಾರೆ. ಹೀಗಾಗಿ, ಅಂತಹವರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದಿಲ್ಲ ಎಂದರು.
ಅಲ್ಲದೆ, ಲಸಿಕೆಯ ಕುರಿತು ನಂಬಿಕೆ, ವಿಶ್ವಾಸ ಶೇ.100ಕ್ಕೆ 100ರಷ್ಟಿದೆ. ಇತರೆ ವ್ಯಾಕ್ಸಿನ್ಗಿಂತ ನಮ್ಮಲ್ಲಿ ಸಿದ್ದವಾಗಿರುವ ವ್ಯಾಕ್ಸಿನ್ ಗುಣಮಟ್ಟದ್ದಾಗಿದೆ. ಈಗಾಗಲೇ ಫ್ರಂಟ್‌ಲೈನ್ ವಾರಿಯರ್ಸ್ಗೆ ವ್ಯಾಕ್ಸಿನೇಷನ್ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ 50 ವರ್ಷ ದಾಟಿದವರಿಗೂ ಲಸಿಕೆ ನೀಡುವ ಕೆಲಸ ಮಾಡುತ್ತೇವೆ ಎಂದರು.