ಕರ್ನಾಟಕ

karnataka

ಕೋವಿಡ್ ಮೂರನೇ ಅಲೆ ಬರುವ ಹೊತ್ತಿಗೆ ಪಡೆಯಲೇಬೇಕು ಲಸಿಕೆ: ಇಲ್ಲದಿದ್ದರೆ ಅಪಾಯವೇನು ಗೊತ್ತಾ?

By

Published : May 14, 2021, 2:29 PM IST

ಯುಕೆ, ದಕ್ಷಿಣ ಆಫ್ರಿಕಾ ಡಬಲ್ ಮ್ಯುಟೇಷನ್ ಸೋಂಕು ರಾಜ್ಯಕ್ಕೆ ಕಾಲಿಟ್ಟು ಹಲವರನ್ನ ಕಾಡುತ್ತಿದೆ.‌ ಈ ರೂಪಾಂತರಿಯಿಂದಲೇ ಹೊರ ಬಾರದ ನಾವುಗಳು ಇದೀಗ ಮತ್ತೊಂದು ಅಲೆಗೆ ಸಿದ್ಧವಾಗಬೇಕಿದೆ. ಕೋವಿಡ್ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಅದರ ತೀವ್ರತೆಯನ್ನ ಎದುರಿಸಬೇಕಾದರೆ ಎಲ್ಲರೂ ಲಸಿಕೆಯನ್ನ ಪಡೆದಿರಬೇಕು ಅಂತ ತಜ್ಞ ವೈದ್ಯರು ತಿಳಿಸಿದ್ದಾರೆ.

Bangalore
ಮಣಿಪಾಲ್ ಆಸ್ಪತ್ರೆ ವೈದ್ಯ ಡಾ.ಸಚಿನ್

ಬೆಂಗಳೂರು: ಕರ್ನಾಟಕದಲ್ಲಿ ಸಾಂಕ್ರಾಮಿಕ ಕೊರೊನಾ ವೈರಸ್​​ನ ಅಸಲಿ ಆಟ ಶುರುವಾಗಿದೆ. ಈಗಾಗಲೇ ಸಾವಿರಾರು ಜನರನ್ನ‌‌ ಬಲಿ ತೆಗೆದುಕೊಂಡಿರುವ ಕೊರೊನಾ ಸೋಂಕು, ಇನ್ನೂ ತನ್ನ ಆರ್ಭಟ ಮುಂದುವರೆಸುತ್ತಿದೆ.‌ ಸೋಂಕಿನ ತೀವ್ರತೆಯ ಅರಿವು ಜನರಿಗೆ ಇದ್ದರೂ ಸಮುದಾಯಕ್ಕೆ ಹರಡಿರುವ ಕೊರೊನಾ ಸಾಕಷ್ಟು ಸಂಕಷ್ಟವನ್ನ ನೀಡುತ್ತಿದೆ‌. ಅದೆಷ್ಟೇ ಮುನ್ನಚ್ಚರಿಕೆ ಕೈಗೊಂಡರೂ ಕೂಡ ಸೋಂಕು ಹರಡುವಿಕೆಯನ್ನ‌ ತಪ್ಪಿಸಲು ಸಾಧ್ಯವಾಗ್ತಿಲ್ಲ.

ಕೋವಿಡ್ ಮೂರನೇ ಅಲೆ ಬರುವ ಹೊತ್ತಿಗೆ ಪಡೆಯಲೇಬೇಕು ಲಸಿಕೆ: ಇಲ್ಲದಿದ್ದರೆ ಅಪಾಯವೇನು ಗೊತ್ತಾ?

ಈಗಾಗಲೇ ಕೋವಿಡ್ ಮೊದಲ ಅಲೆಯನ್ನ ಕಂಡಿರುವ ನಾವು, ಇದೀಗ ಎರಡನೇ ಅಲೆಯಿಂದ ತತ್ತರಿಸಿ ಹೋಗಿದ್ದೇವೆ. ಯುಕೆ, ದಕ್ಷಿಣ ಆಫ್ರಿಕಾದ ಡಬಲ್ ಮ್ಯುಟೇಷನ್ ಸೋಂಕು ರಾಜ್ಯಕ್ಕೆ ಕಾಲಿಟ್ಟು ಹಲವರನ್ನ ಕಾಡುತ್ತಿದೆ.‌ ಈ ರೂಪಾಂತರಿಯಿಂದಲೇ ಹೊರ ಬಾರದ ನಾವುಗಳು ಇದೀಗ ಮತ್ತೊಂದು ಅಲೆಗೆ ಸಿದ್ಧವಾಗಬೇಕಿದೆ. ಕೋವಿಡ್ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ಅದರ ತೀವ್ರತೆಯನ್ನ ಎದುರಿಸಬೇಕಾದರೆ ಎಲ್ಲರೂ ಲಸಿಕೆಯನ್ನ ಪಡೆದಿರಬೇಕು ಅಂತ ತಜ್ಞ ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಮಾತಾನಾಡಿರುವ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ. ಸಚಿನ್, ರಾಜ್ಯದಲ್ಲಿ ಎರಡನೇ ಅಲೆಯ ಸೋಂಕಿತರ ಸಂಖ್ಯೆ ಹಾಗೂ ಸಾವಿನ‌‌ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಸೋಂಕಿನ ತೀವ್ರತೆ ಜಾಸ್ತಿಯಾಗ್ತಿರೋದನ್ನ ನೋಡ್ತಿದ್ದೀವಿ. ಇಂತಹ ಸಂದರ್ಭದಲ್ಲಿ ಸರ್ಕಾರ ಲಾಕ್​ಡೌನ್ ಅನ್ನೋ ಅಸ್ತ್ರವನ್ನ ಬಳಸಿದೆ. ಇದಕ್ಕೆ ಜನರು ಕೂಡ ಸಹಕಾರ ಕೊಟ್ಟು ಕೊರೊನಾ ಮುನ್ನೆಚ್ಚರಿಕಾ ಕ್ರಮಗಳಾದ ಮಾಸ್ಕ್ ಧರಿಸುವುದು, ದೈಹಿಕ ಅಂತರವನ್ನ ಕಾಪಾಡುವುದು, ಸ್ವಚ್ಛತೆಯನ್ನ ಕಾಪಾಡಬೇಕು ಅಂತ ತಿಳಿಸಿದರು.

ನೋ ವ್ಯಾಕ್ಸಿನ್ ಬೋರ್ಡ್

ಎರಡನೇ ಅಲೆಯನ್ನ ಎದುರಿಸಲು ಆಗದೇ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆಯನ್ನ ಎದುರಿಸುತ್ತಿರುವ ಸರ್ಕಾರ, ಇದೀಗ ವ್ಯಾಕ್ಸಿನ್ ಸಮಸ್ಯೆಯನ್ನೂ ಎದರಿಸುತ್ತಿದೆ. ಕೊರೊನಾ‌ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಭೀತಿಗೆ ಒಳಗಾದ ಜನರು ವ್ಯಾಕ್ಸಿನ್ ಪಡೆಯಲು ಮುಗಿಬಿದ್ದರು.‌ ಪರಿಣಾಮ ಸರಿಯಾದ ಸಮಯಕ್ಕೆ ವ್ಯಾಕ್ಸಿನ್ ಸರಬರಾಜು ಆಗದ ಕಾರಣಕ್ಕೆ ನೋ ವ್ಯಾಕ್ಸಿನ್ ಬೋರ್ಡ್ ಆಸ್ಪತ್ರೆಗಳ ಮುಂದೆ ನೇತಾಡುತ್ತಿದೆ.‌

ಈ ನಡುವೆ ಎರಡನೇ ಡೋಸ್ ಪಡೆಯಬೇಕಾದವರು ಸಹ ಕಾಯುವಂತೆ ಆಗಿದೆ. ಈ ನಿಟ್ಟಿನಲ್ಲಿ ಸರ್ಕಾರವೂ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನ ಜನರಿಗೆ ಕೊರೊನಾ ಲಸಿಕಾಭಿಯಾನವನ್ನ ತಾತ್ಕಾಲಿಕವಾಗಿ ಮುಂದೂಡಿದೆ. ಇತ್ತ ನವೆಂಬರ್​ನಲ್ಲಿ ಮೂರನೇ ಅಲೆಯ ಭೀತಿ ಬಗ್ಗೆ ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ಈ ವೇಳೆಗೆ ಪ್ರತಿಯೊಬ್ಬರು ಲಸಿಕೆಯನ್ನ ಪಡೆಯಬೇಕಿದೆ. ಇಲ್ಲವಾದರೆ ಮುಂದಿನ ಪರಿಣಾಮಕ್ಕೆ ಸಜ್ಜಾಗಬೇಕಿದೆ‌‌..

ABOUT THE AUTHOR

...view details