ಕರ್ನಾಟಕ

karnataka

ETV Bharat / city

ಕೊರೊನಾ ಭೀತಿ ನಡುವೆಯೂ ಯಶವಂತಪುರ ಪೊಲೀಸ್​​ ಠಾಣೆಯಲ್ಲಿ ಬರ್ತಡೇ ಸಂಭ್ರಮ - ಕೊರೊನಾ ನಡುವೆ ಪೊಲೀಸರ ಹುಟ್ಟುಹಬ್ಬ ಆಚರಣೆ

ಮಹಾನಗರದ ಯಶವಂತರಪುರ ಪೊಲೀಸ್​ ಠಾಣೆಯನ್ನು ಸೀಲ್​ ಡೌನ್​ ಮಾಡುವ ಸಂಭವಿದೆ. ಇದರ ನಡುವೆ ಅಲ್ಲಿನ ಸಿಬ್ಬಂದಿ ಇನ್ಸ್​ಪೆಕ್ಟರ್​​ ಬರ್ತಡೇ ಆಚರಿಸುವ ಮೂಲಕ ಯಡವಟ್ಟು ಮಾಡಿಕೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

corona-suspected-yeshwanthpur-police-celebrated-birthday
ಯಶವಂತಪುರ ಪೊಲೀಸ್​ ಠಾಣೆ

By

Published : Jul 10, 2020, 8:31 PM IST

ಬೆಂಗಳೂರು: ಕೊರೊನಾ‌ ಭೀತಿಯಲ್ಲಿರುವ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕೊರೊನಾ‌ ಸೋಂಕು ದೃಢವಾಗಿದೆ. ಠಾಣೆ ಸೀಲ್ ಡೌನ್ ಆಗುವ ಸಾಧ್ಯತೆ ಇದ್ದರೂ ಸಹ ಏನೂ ಇಲ್ಲದಂತೆ ಪೊಲೀಸರು ಬರ್ತಡೇ ಆಚರಿಸಿದ್ದಾರೆ.

ಕೊರೊನಾ ಭೀತಿ ನಡುವೆಯೂ ಠಾಣೆಯಲ್ಲಿ ಬರ್ತಡೇ ಸಂಭ್ರಮ

ಇತ್ತೀಚೆಗೆ ಅಪರಾಧ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಪೈಕಿ ಓರ್ವನಿಗೆ‌ ಕೊರೊನಾ ಸೋಂಕು ತಗುಲಿದ ಹಿನ್ನೆಲೆ‌ ಪ್ರಾಥಮಿಕ ಸಂಪರ್ಕದಲ್ಲಿದ್ದ ಪೊಲೀಸರನ್ನು ಸ್ವ್ಯಾಬ್ ಟೆಸ್ಟ್​ಗೆ ಒಳಪಡಿಸಿದಾಗ ಸಿಬ್ಬಂದಿಗೆ ಕೊರೊನಾ ತಗುಲಿರುವುದು ಪತ್ತೆಯಾಗಿದೆ.

ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಸಹ ಠಾಣೆಯ ಇನ್ಸ್​ಪೆಕ್ಟರ್​​ ಬರ್ತಡೇ ಸಂಭ್ರಮಕ್ಕೆ ಅವಕಾಶ ಮಾಡಿಕೊಡುವ ಮೂಲಕ ಯಡವಟ್ಟು ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ABOUT THE AUTHOR

...view details