ಬೆಂಗಳೂರು :ಪಾಸಿಟಿವ್ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದವನ ವರದಿ ಒಂದು ದಿನ ಕಳೆದ ಬಳಿಕ ಆತನ ಮೊಬೈಲ್ಗೆ ಕೊರೊನಾ ನೆಗೆಟಿವ್ ಎಂಬ ಸಂದೇಶ ಬಂದಿದೆ. ಇಂತಹದೊಂದು ಘಟನೆ ನಗರದ ಕಬ್ಬನ್‌ಪೇಟೆಯಲ್ಲಿ ನಡೆದಿದೆ. ಏಳು ಮಂದಿ ಈ ವಿಚಾರಕ್ಕೆ ಕಕ್ಕಾಬಿಕ್ಕಿಯಾಗಿದ್ದಾರೆ.
ಕೊರೊನಾ ವರದಿ ಎಡವಟ್ಟಾಯ್ತು ತಲೆಕೆಟ್ಟೋಯ್ತು..
ನಿಮಗೆ ಕೊರೊನಾ ಪಾಸಿಟಿವ್ ಎಂದು ಏಳು ಮಂದಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಒಂದು ದಿನ ದಿನದ ನಂತರ ನೆಗಟಿವ್ ಎಂದು ಸಂದೇಶ ಬಂದಿದೆ. ಅಧಿಕಾರಿಗಳಿಂದಾಗಿರುವ ಇಂತಹ ಎಡವಟ್ಟಿಗೆ ಸುಖಾಸುಮ್ಮನೆ ಜನರು ಭಯಭೀತರಾಗುತ್ತಿದ್ದಾರೆ..
ಈ ಕುರಿತು ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದ್ರೆ ಸಿಸ್ಟಂ ಹ್ಯಾಕ್ ಆಗಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಇದು ಬಿಬಿಎಂಪಿ ನಿರ್ಲಕ್ಷ್ಯವೋ, ಲ್ಯಾಬ್ಗಳ ಲೋಪವೋ ಗೊತ್ತಿಲ್ಲ. ಆದರೆ, ಜನರಿಗೆ ಸಮಸ್ಯೆಯಾಗುತ್ತಿದೆ. ಈಗ ಇಷ್ಟೂ ಮಂದಿ ಕೊರೊನಾ ರೋಗಿಗಳ ಜೊತೆ ಕಾಲ ಕಳೆದಿರುವ ಕಾರಣ, ಅವರು ಮನೆಗೆ ಹೋಗಲು ಹಿಂಜರಿಯುತ್ತಿದ್ದಾರೆ.
ಹೀಗಾಗಿ, ವಯಸ್ಸು ಆಗಿರುವವರನ್ನು ಆಕಾಶ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಎ ಸಿಮ್ಟಾಮ್ಯಾಟಿಕ್ ಇರೋರನ್ನ ಹೆಬ್ಬಾಳದ ಜಿಕೆವಿಕೆ ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲಾಗಿದೆ. ಕೊರೊನಾ ಸಂಕಷ್ಟದ ಮಧ್ಯೆ ಅಧಿಕಾರಿಗಳ ಎಡವಟ್ಟುಗಳು ಒಂದೊಂದಾಗಿ ಬಯಲಾಗ್ತಿವೆ.