ಕರ್ನಾಟಕ

karnataka

ETV Bharat / city

ಕೊರೊನಾದಿಂದ ಮುಕ್ತರಾದವರು ಬೇರೆ ರೋಗಿಗಳ ಚಿಕಿತ್ಸೆಗೆ ಪ್ಲಾಸ್ಮಾ ದಾನ ಮಾಡಿ: ಸಿದ್ದರಾಮಯ್ಯ ಕರೆ - ದಾನ ಸುದ್ದಿ, ಸಿದ್ದರಾಮಯ್ಯ ಸುದ್ದಿ,

ಕೊರೊನಾ ಮುಕ್ತರು ಬೇರೆ ರೋಗಿಗಳ ಚಿಕಿತ್ಸೆಗೆ ತಮ್ಮ ಪ್ಲಾಸ್ಮಾವನ್ನು ದಾನ ಮಾಡಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

plasma treatment, plasma donate, plasma donate news, Siddaramaiah news, Siddaramaiah tweet news, ಪ್ಲಾಸ್ಮಾ ಚಿಕತ್ಸೆ, ಪ್ಲಾಸ್ಮಾ ದಾನ, ಪ್ಲಾಸ್ಮಾ ದಾನ ಸುದ್ದಿ, ಸಿದ್ದರಾಮಯ್ಯ ಸುದ್ದಿ, ಸಿದ್ದರಾಮಯ್ಯ ಟ್ವೀಟ್​ ಸುದ್ದಿ,
ಸಂಗ್ರಹ ಚಿತ್ರ

By

Published : Jul 1, 2020, 7:22 PM IST

ಬೆಂಗಳೂರು: ಕೊರೊನಾ ಮಹಾಮಾರಿಯಿಂದ ಮುಕ್ತರಾದವರು ತಮ್ಮ ಪ್ಲಾಸ್ಮಾವನ್ನು ಇತರ ರೋಗಿಗಳ ಚಿಕಿತ್ಸೆಗೆ ದಾನ ಮಾಡಬೇಕು ಎಂದು ಮಾಜಿ ಸಿಎಂ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೊರೊನಾ ಸೋಂಕಿನಿಂದ ಗುಣಮುಖರಾದವರು ತಮ್ಮ ರಕ್ತದಲ್ಲಿನ ಪ್ಲಾಸ್ಮಾವನ್ನು ಬೇರೆ ಸೋಂಕಿತರ ಚಿಕಿತ್ಸೆಗಾಗಿ ದಾನ ಮಾಡಬೇಕೆಂದು ಕೋರುತ್ತಿದ್ದೇನೆ. ನಿಮ್ಮ ಆರೋಗ್ಯ ರಕ್ಷಣೆಗಾಗಿ ನೂರಾರು ಮಂದಿ ಶ್ರಮಿಸಿದ್ದಾರೆ. ಈಗ ನೀವು ಅವರೆಲ್ಲರ ಋಣ ತೀರಿಸುವ ಕರ್ತವ್ಯವನ್ನು‌ ನಿಭಾಯಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆ ಕೂಡ ಏರುತ್ತಿದೆ. ಪ್ಲಾಸ್ಮಾ ಚಿಕಿತ್ಸೆಯಿಂದ ಒಂದಿಷ್ಟು ಜೀವ ಉಳಿಸುವ ಅವಕಾಶ ಇರುವ ಹಿನ್ನೆಲೆ ಕೊರೊನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಬೇಕೆಂದು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಈ ಮೂಲಕವಾದ್ರೂ ರಾಜ್ಯಕ್ಕೆ ಎದುರಾಗಿರುವ ಗಂಡಾಂತರ ಕೊಂಚ ಮಟ್ಟಿಗೆ ತಗ್ಗಲಿ ಎಂಬುದು ಸಿದ್ದರಾಮಯ್ಯರ ಆಶಯವಾಗಿದೆ.

ABOUT THE AUTHOR

...view details