ಬೆಂಗಳೂರು:ಕಳೆದ ಒಂದು ವಾರದಿಂದ ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇಂದು 930 ಜನರಲ್ಲಿ ಸೋಂಕು ದೃಢಪಟ್ಟಿದೆ.
ಹಲವು ತಿಂಗಳ ಬಳಿಕ ಮಂಗಳವಾರ 700, ಬುಧವಾರ 786 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಇಂದು ಬರೋಬ್ಬರಿ 930 ಕೋವಿಡ್ ಕೇಸ್ಗಳು ಪತ್ತೆಯಾಗಿವೆ. ಬೆಳಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ದಾಖಲಾಗುವ ಕೊರೊನಾ ಪ್ರಕರಣವನ್ನು ಮರುದಿನ ಕೊಡುವ ಹಿನ್ನಲೆ, ಇಂದು ಬರುವ ರಿಪೋರ್ಟ್ನಲ್ಲಿ 930 ಜನರಲ್ಲಿ ಕೋವಿಡ್ ಪ್ರಕರಣ ದೃಢಪಟ್ಟಿದೆ. ಅಲ್ಲದೆ, ಇಂದು ಬೆಳಗ್ಗೆ 6 ಗಂಟೆಯಿಂದ 12-30ರ ವೇಳೆಗೆ 338 ಜನರಲ್ಲಿ ಕೋವಿಡ್ ದೃಢಪಟ್ಟಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿದ್ದಾರೆ.