ಬೆಂಗಳೂರು:ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಾಣುತ್ತಿದೆ. ಬೆಂಗಳೂರು ನಗರದಲ್ಲಿಂದು 1,746 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮೊನ್ನೆ ನಗರದಲ್ಲಿ 2,023 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ನಿನ್ನೆ 1,115 ಪಾಸಿಟಿವ್ ಪ್ರಕರಣಗಳು ದಾಖಲಾಗಿತ್ತು.
ನಿನ್ನೆಗಿಂತ ಇಂದಿನ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ ಕೂಡ ಪಾಸಿಟಿವಿಟಿ ದರ ಗಣನೀಯವಾಗಿ ಕಡಿಮೆಯಾಗುತ್ತಿದೆ.
ರಾಜ್ಯದಲ್ಲಿ ಲಾಕ್‌ಡೌನ್ ಮಾಡಿದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದೆ. ಒಂದೇ ತಿಂಗಳಲ್ಲಿ ಶೇ. 60ರಷ್ಟು ಸೋಂಕು ಇಳಿಕೆಯಾಗಿದೆ. ಇನ್ನು ಮೇ ತಿಂಗಳ ಮೊದಲ 9 ದಿನಗಳಲ್ಲಿ 5 ಲಕ್ಷ ಕೇಸ್‌ಗಳು ದಾಖಲಾಗಿದ್ದವು. ಆದರೆ, ಜೂನ್ ತಿಂಗಳ ಮೊದಲ 9 ದಿನಗಳಲ್ಲಿ 2 ಲಕ್ಷ ಕೇಸ್‌ಗಳು ದಾಖಲಾಗಿವೆ. ಅಂದರೆ ಶೇ. 60ರಷ್ಟು ಸೋಂಕು ಕಡಿಮೆಯಾಗಿದೆ.