ಬೆಂಗಳೂರು:ಹಲವು ದಿನಗಳ ಬಳಿಕ ನಗರದ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಪ್ರತಿದಿನ ಎರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಸೋಮವಾರ 1,470 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಬೆಂಗಳೂರಲ್ಲಿಂದು 1,470 ಮಂದಿಗೆ ಕೊರೊನಾ... 26 ಮಂದಿ ಸಾವು - Bangalore corona update
ಬೆಂಗಳೂರಿನಲ್ಲಿಂದು 1,470 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 26 ಮಂದಿ ಮೃತಪಟ್ಟಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿಂದು 1,470 ಮಂದಿಗೆ ಕೊರೊನಾ..26 ಮಂದಿ ಸಾವು
ಅಲ್ಲದೆ, ಇಂದು 784 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 12,189 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ನಗರದಲ್ಲಿ ಒಟ್ಟು 46,923 ಮಂದಿಗೆ ಸೋಂಕು ತಗುಲಿದ್ದು, 33,816 ಸಕ್ರಿಯ ಪ್ರಕರಣಗಳಿವೆ. ಇಂದು 26 ಮಂದಿ ಮೃತಪಟ್ಟಿದ್ದು, ಈವರೆಗೆ ಒಟ್ಟು 917 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ.
ನಗರದಲ್ಲಿ ಕಂಟೇನ್ಮೆಂಟ್ ಪ್ರದೇಶಗಳ ಸಂಖ್ಯೆ 16,005 ಕ್ಕೆ ಏರಿಕೆಯಾಗಿದೆ. ಕೊರೊನಾ ಪಾಸಿಟಿವಿಟಿ ಪ್ರಮಾಣ ಕೂಡಾ ಶೇಕಡಾ 16.9ರಷ್ಟಿದೆ. ನಗರದ ದಕ್ಷಿಣ ವಲಯದಲ್ಲೇ ಅತಿಹೆಚ್ಚು ಕೊರೊನಾ ಪ್ರಕರಣಗಳಿದ್ದು, ಪೂರ್ವ ಹಾಗೂ ಪಶ್ಚಿಮ ವಲಯಗಳು ನಂತರದ ಸ್ಥಾನದಲ್ಲಿವೆ.