ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 1,203 ಕೊರೊನಾ ಕೇಸ್​ ಪತ್ತೆ: 11 ಮಂದಿ ಸಾವು - Karnataka Corona Case

ರಾಜ್ಯದಲ್ಲಿಂದು 1,203 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೋವಿಡ್ ಸೋಂಕಿತರ ಸಂಖ್ಯೆಯು 9 ಲಕ್ಷ ದಾಟಿದೆ.

Corona positive for 1,203 people in the state
ರಾಜ್ಯದಲ್ಲಿಂದು 1,203 ಕೊರೊನಾ ಕೇಸ್​ ಪತ್ತೆ: 11 ಮಂದಿ ಸಾವು

By

Published : Dec 12, 2020, 6:57 PM IST

Updated : Dec 12, 2020, 7:44 PM IST

ಬೆಂಗಳೂರು: ರಾಜ್ಯದಲ್ಲಿಂದು 1,203 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,00,214ಕ್ಕೆ ಏರಿಕೆಯಾಗಿದೆ.

ಇಂದು 11 ಮಂದಿ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 11,939ಕ್ಕೆ ಏರಿಕೆಯಾಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ. 1.17ರಷ್ಟು ಹಾಗೂ ಸಾವಿನ ಪ್ರಮಾಣ ಶೇ. 0.91ರಷ್ಟು ಇದೆ.

ಕೊರೊನಾದಿಂದ ಇಂದು 1,531 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 8,70,002 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 244 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದು, ರಾಜ್ಯದಲ್ಲಿ ಸದ್ಯ 18,254 ಸಕ್ರಿಯ ಪ್ರಕರಣಗಳು ಇವೆ. ಕಳೆದ 7 ದಿನಗಳಲ್ಲಿ 25,108 ಜನರು ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ.

ಇನ್ನು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 89,533, ದ್ವಿತೀಯ ಸಂಪರ್ಕದಲ್ಲಿ 10,109 ಜನರಿದ್ದಾರೆ. 1,496 ಪ್ರಯಾಣಿಕರನ್ನ‌ ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಡಿಸಲಾಗಿದ್ದು, ಈವರೆಗೆ 12,26,68,16 ಮಂದಿ ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ನಗರದಲ್ಲಿಂದು 606 ಪಾಸಿಟಿವ್ - 6 ಬಲಿ:
ಬೆಂಗಳೂರು ನಗರದಲ್ಲಿಂದು 606 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 3,77,857 ಕ್ಕೆ ಏರಿಕೆಯಾಗಿದೆ. 923 ಮಂದಿ ಇಂದು ಬಿಡುಗಡೆಯಾಗಿದ್ದು, ಒಟ್ಟು 3,60,724 ಮಂದಿ ಈವರೆಗೆ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 12,902 ಇದೆ. ನಗರದಲ್ಲಿ ಒಟ್ಟು ಮೃತಪಟ್ಟವರ 4,230 ಕ್ಕೆ ಏರಿಕೆಯಾಗಿದೆ.

Last Updated : Dec 12, 2020, 7:44 PM IST

ABOUT THE AUTHOR

...view details