ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ 600ರ ಗಡಿದಾಟಿದ ಸೋಂಕಿತರು: ವಲಸೆ ಕಾರ್ಮಿಕರಿಗೆ ವಿಶೇಷ ರೈಲು..! - ವಲಸೆ ಕಾರ್ಮಿಕರು

ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳಿಸಲು ಹಾಗೂ ಬೇರೆ ರಾಜ್ಯಗಳಲ್ಲಿನ ವಲಸೆ ಕಾರ್ಮಿಕರನ್ನು ಕರೆತರಲು ಸರ್ಕಾರ ಕ್ರಮ ಕೈಗೊಂಡಿದೆ.

migrated labours
ವಲಸೆ ಕಾರ್ಮಿಕರು

By

Published : May 2, 2020, 7:54 PM IST

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 601ಕ್ಕೆ ಏರಿಕೆ ಆಗಿದೆ. ಇಂದು ಹೊಸ 12 ಕೇಸ್​​ಗಳು ಪತ್ತೆಯಾಗಿದ್ದು, ಈವರೆಗೆ 25 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇವರಲ್ಲಿ 271 ಮಂದಿ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದು, 304 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರು ಗುಣಮುಖವಾಗುವ ತನಕ, ಹಾಗೂ ಶಂಕಿತರು ಕನಿಷ್ಠ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿದ್ದು ಕೊರೊನಾ ನೆಗೆಟಿವ್ ಎಂದು ಸಾಬೀತಾಗುವ ತನಕ ಅಥವಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆ ಸಿಗುವ ತನಕ ಬಿಡುಗಡೆ ಮಾಡಲಾಗುವುದಿಲ್ಲ ಅಂತ ಇಲಾಖೆ ತಿಳಿಸಿದೆ. ಪ್ರತ್ಯೇಕ ವ್ಯವಸ್ಥೆಯಲ್ಲಿ ಇಷ್ಟೊಂದು ಸುದೀರ್ಘ ಕಾಲ ಇರಲು ಮಾನಸಿಕ ಸ್ಥೈರ್ಯ ಅಗತ್ಯವಿದೆ. ಹೀಗಾಗಿ ಆಪ್ತ ಸಮಾಲೋಚನೆ ಸೇವೆಗಳನ್ನು ಸರ್ಕಾರ ಕಲ್ಪಿಸುತ್ತಿದೆ. ಈವರೆಗೆ 60,255 ಜನರಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ.

ರಾಜ್ಯದಲ್ಲಿ ಹೆಚ್ಚುತ್ತಿದೆ SARI/ILI ಪ್ರಕರಣ; ವಿಶೇಷ ಸಾಫ್ಟ್‌ವೇರ್ ಆಪ್ ಅಭಿವೃದ್ಧಿ

ರಾಜ್ಯದಲ್ಲಿ ದಿನೇ ದಿನೆ SARI (Severe Acute Respiratory Infection) ಅಂದರೆ ತೀವ್ರ ಉಸಿರಾಟದ ತೊಂದರೆ, ILI (Influenza like illness) ಹೆಚ್ಚುತ್ತಿವೆ. ಈ ಪ್ರಕರಣಗಳ ಮಾಹಿತಿ ಕಾಯ್ದಿರಿಸಲು ಹಾಗೂ ಅಂಕಿ - ಅಂಶಗಳನ್ನು ದಾಖಲಿಸಲು ಆರೋಗ್ಯ ಇಲಾಖೆಯು ಒಂದು ವಿಶೇಷ ಸಾಫ್ಟ್‌ವೇರ್ ಅಪ್ಲಿಕೇಷನ್​ ಅನ್ನು ಅಭಿವೃದ್ಧಿ ಪಡಿಸಿದೆ. ಈ‌ ಕುರಿತು ಎಲ್ಲಾ ಖಾಸಗಿ/ಆರೋಗ್ಯ ಕೇಂದ್ರಗಳು ಮತ್ತು ಸಂಸ್ಥೆಗಳಿಗೆ ತರಬೇತಿ ನೀಡಲಿದೆ. ಏಪ್ರಿಲ್ 4ರಿಂದ 11 ಗಂಟೆಗೆ ತರಬೇತಿ ನಡೆಯಲಿದೆ. ರೋಗಿಗಳ ಮಾಹಿತಿಯನ್ನು ದಾಖಲಿಸಲು ಕೆಪಿಎಂಇಯಲ್ಲಿ ನೋಂದಾಯಿತರು https//kpme.Karnataka.tech/ ವೆಬ್ ಪೋರ್ಟಲ್​​ನಲ್ಲಿ ಲಾಗಿನ್ ಆಗಬಹುದು.


ವಲಸೆ ಕಾರ್ಮಿಕರು ಪ್ರಯಾಣಿಸಲು ವಿಶೇಷ ರೈಲು ವ್ಯವಸ್ಥೆ

ರಾಜ್ಯದ ವಿವಿಧೆಡೆ ಸಿಲುಕಿರುವ ವಲಸೆ ಕಾರ್ಮಿಕರು, ಧಾರ್ಮಿಕ ಯಾತ್ರಿಗಳು, ಪ್ರವಾಸಿಗರು, ವಿದ್ಯಾರ್ಥಿಗಳಿಗಾಗಿ ರೈಲ್ವೆ ಇಲಾಖೆಯಿಂದ ವಿಶೇಷ ರೈಲುಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಬರಲು ಇಚ್ಚಿಸುವವರು ಹಾಗೂ ಕರ್ನಾಟಕದಿಂದ ಹೊರ ರಾಜ್ಯಕ್ಕೆ ಪ್ರಯಾಣಿಸುವರು ಸೇವಾಸಿಂಧು ಅಪ್ಲಿಕೇಷನ್​ನಲ್ಲಿ ನೋಂದಾಯಿಸಿಕೊಳ್ಳಬೇಕು. ಅದಲ್ಲದೇ https://Sevasindhu.Karnataka.gov.in/sevasindhu/English ವೆಬ್​ಸೈಟ್​​ನಲ್ಲಿಯೂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ವೆಬ್​ಸೈಟ್​ ನೋಂದಣಿಗೆ ಮಾತ್ರ ಸೀಮಿತವಾಗಿದ್ದು,ರೈಲು ಸಂಚಾರದ ಮಾಹಿತಿಯನ್ನು ಶೀಘ್ರದಲ್ಲೇ ಸರ್ಕಾರ ತಿಳಿಸಲಿದೆ.

ABOUT THE AUTHOR

...view details