ಬೆಂಗಳೂರು: ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ, ಬಿಗಿ ನಿಯಮ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಇಲಾಖೆ ಕೋವಿಡ್ ಮಾರ್ಗಸೂಚಿ ಹೊರಡಿಸಿದ್ದು, ಸಾರ್ವಜನಿಕರು ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲನೆ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ.
ಮಾಸ್ಕ್ ಧರಿಸದಿದ್ದಲ್ಲಿ ಬೆಂಗಳೂರು ನಗರ ಮತ್ತು ಇತರ ನಗರಗಳಲ್ಲಿ 250 ರೂ. ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ. ಪಾಲಿಕೆ ವ್ಯಾಪ್ತಿ ಹೊರತುಪಡಿಸಿ 100 ರೂ. ದಂಡ ವಿಧಿಸಲಾಗುವುದು. ಬಿಬಿಎಂಪಿ ಮಾರ್ಷಲ್ಗಳು, ಹೆಡ್ ಕಾನ್ಸ್ಟೇಬಲ್ ಮತ್ತು ಮೇಲ್ಪಟ್ಟ ಪೊಲೀಸ್ ಅಧಿಕಾರಿ, ಹೆಲ್ತ್ ಇನ್ಸ್ಪೆಕ್ಟರ್, ಪಿಡಿಒ, ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ. ಸಾಮಾಜಿಕ ಅಂತರ ಪಾಲನೆ ಮಾಡದೇ ಇದ್ದರೆ 250 ರೂ. ದಂಡ ವಿಧಿಸಲಾಗುತ್ತದೆ.
ಮದುವೆ ಹಾಲ್, ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಸೀಮಿತ ಜನರನ್ನು ಹೊರತುಪಡಿಸಿ ಹೆಚ್ಚು ಜನ ಇದ್ದರೆ ಹಾಗೂ ಮಾಸ್ಕ್ ಧರಿಸದೇ ಇದ್ದಲ್ಲಿ, ನಾನ್ ಎಸಿ ಪಾರ್ಟಿ ಹಾಲ್ಗೆ ಐದು ಸಾವಿರ ರೂ. ದಂಡ, ಎಸಿ ಹಾಲ್ಗೆ 10 ಸಾವಿರ ರೂ. ದಂಡ ವಿಧಿಸಲಾಗುವುದು.
ಒಳಾಂಗಣ ಸಭಾಂಗಣದಲ್ಲಿ 200 ಜನ, ಹೊರಾಂಗಣದಲ್ಲಿ 500 ಜನ ಮಾತ್ರ ಅನುಮತಿ ನೀಡಲಾಗಿದೆ. ಸ್ಟಾರ್ ಹೋಟೆಲ್ನಲ್ಲಿ ಹೆಚ್ಚು ಜನ ಸೇರಿಸಿ ಕಾರ್ಯಕ್ರಮ ನಡೆಸಿದರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಇನ್ನು ರಾಜಕೀಯ ಪಕ್ಷಗಳ ಸಭೆ ಸಮಾರಂಭ, ರ‍್ಯಾಲಿಗೂ 500 ಜನ ನಿಗದಿ ಪಡಿಸಲಾಗಿದೆ. ಹೆಚ್ಚು ಜನ ಸೇರಿದರೆ ರ‍್ಯಾಲಿ ಆಯೋಜಿಸಿದವರ ಮೇಲೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಎಲ್ಲೆಲ್ಲಿ ಎಷ್ಟು ಮಂದಿಗೆ ಅನುಮತಿ?: