ಕರ್ನಾಟಕ

karnataka

ETV Bharat / city

ಖಾಸಗಿ ಆಸ್ಪತ್ರೆಗಳು ಕಣ್ಣಾ ಮುಚ್ಚಾಲೇ ಆಟ ಬಿಟ್ಟು ಸರ್ಕಾರಕ್ಕೆ ನೀಡಬೇಕಾದ ಬೆಡ್ ಕೊಡಿ : ಸಚಿವ ಅಶೋಕ್ ಎಚ್ಚರಿಕೆ

ಮೂರು ಆಸ್ಪತ್ರೆಗೆ ನೋಟಿಸ್ ನೀಡಿ ಓಪಿಡಿ ಬಂದ್ ಮಾಡಲು ಸೂಚಿಸುತ್ತೇನೆ. ನಾವು ಬದಲಾವಣೆ ತರಲು ಹೊರಟ್ಟಿದ್ದೇವೆ. ಹಾಸಿಗೆ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ..

corona-meeting-minister-ashok-reaction
ಖಾಸಗಿ ಆಸ್ಪತ್ರೆಗಳು ಕಣ್ಣಾ ಮುಚ್ಚಾಲೇ ಆಟ ಬಿಟ್ಟು ಸರ್ಕಾರಕ್ಕೆ ನೀಡಬೇಕಾದ ಬೆಡ್ ಕೊಡಿ: ಸಚಿವ ಅಶೋಕ್ ಎಚ್ಚರಿಕೆ

By

Published : May 7, 2021, 6:07 PM IST

ಬೆಂಗಳೂರು : ಕಣ್ಣಾ ಮುಚ್ಚಾಲೆ ಆಟ ಬಿಟ್ಟು ಸರ್ಕಾರಕ್ಕೆ ನೀಡಬೇಕಾದ ಬೆಡ್ ಕೊಡಬೇಕೆಂದು ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ.

ಇನ್ನೆರಡು ದಿನದಲ್ಲಿ ಕೊಡದಿದ್ದರೆ ಓಪಿಡಿ ಬಂದ್ ಮಾಡಿಸುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಬೆಡ್​​ಗಳ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 100ಕ್ಕೂ ಹೆಚ್ಚಿನ ಹಾಸಿಗೆಯುಳ್ಳ ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸಿದ್ದೇವೆ ಎಂದರು.

ಬಿಬಿಎಂಪಿಯಿಂದ ಬಿಯು ನಂಬರ್ ನೀಡಿದ್ರೂ ಅವರಿಗೆ ಬೆಡ್ ದೊರಕುತ್ತಿಲ್ಲ. ಈ ವೇಳೆ ಸೋಂಕಿತರನ್ನು ಆಸ್ಪತ್ರೆಯ ಒಳಗೆ ಇರಿಸಬೇಕು. ತಪಾಸಣೆಗೆ ಆಸ್ಪತ್ರೆಗಳು ಹೆಚ್ಚಿನ ಶುಲ್ಕ ಪಡೆಯಬಾರದೆಂದು ಸೂಚನೆ ನೀಡಿದ್ದೇವೆ ಎಂದು ಅಶೋಕ್ ಭರವಸೆ ನೀಡಿದ್ದಾರೆ.

ಅಧಿಕಾರಿಗಳ ಬದಲಾವಣೆ:ಕೆಲವು ಅಧಿಕಾರಿಗಳನ್ನು ಬದಲಾವಣೆ ಮಾಡಿದ್ದೇವೆ. ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರನ್ನು ಚೀಫ್ ನೋಡಲ್ ಆಫೀಸರ್ ಮಾಡಲಾಗಿದ್ದು, ಅವರಿಗೆ ಬೆಡ್ ಜವಾಬ್ದಾರಿ ನೀಡಿದ್ದೇವೆ.

ಇನ್ನು, ಬೆಡ್ ಮ್ಯಾನೇಜ್​ಮೆಂಟ್‌ನ ಮಂಜುನಾಥ್ ಪ್ರಸಾದ್ ಅವರಿಗೆ ನೀಡಿದ್ದೇವೆ. ಇವತ್ತಿನಿಂದಲೇ ಅವರು ಕಾರ್ಯ ನಿರ್ವಹಿಸುತ್ತಾರೆ. ಇನ್ನು ಮುಂದೆ ಬೆಡ್ ನೀಡುವ ವಿಚಾರದಲ್ಲಿ ಪಾರದರ್ಶಕತೆ ಇರುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:ಕೋವಿಡ್​ ಎರಡನೇ ಅಲೆ: ಅಗತ್ಯ ಆಮ್ಲಜನಕಕ್ಕಾಗಿ ಪ್ರಧಾನಿಗೆ ದೀದಿ ಪತ್ರ- ಕೇಂದ್ರದ ವಿರುದ್ಧ ಆಕ್ರೋಶ

ಚಿಕಿತ್ಸೆ ಮುಗಿದಿದ್ದರೂ ಅವರನ್ನು ಮುಂದುವರೆಸುತ್ತಿರುವ ಕೆಲಸ ಖಾಸಗಿ ಆಸ್ಪತ್ರೆಗಳು ಮಾಡುತ್ತಿವೆ. 10 ದಿನ ಕಳೆದ ಬಳಿಕ ಚಿಕಿತ್ಸೆ ಮುಂದುವರೆಸಬೇಕಾದರೆ ಬಿಬಿಎಂಪಿಯ ಅನುಮತಿ ಪಡೆಯಬೇಕು ಎಂದು ಹೇಳಿದರು.

ಮೂರು ಆಸ್ಪತ್ರೆಗೆ ನೋಟಿಸ್ ನೀಡಿ ಓಪಿಡಿ ಬಂದ್ ಮಾಡಲು ಸೂಚಿಸುತ್ತೇನೆ. ನಾವು ಬದಲಾವಣೆ ತರಲು ಹೊರಟ್ಟಿದ್ದೇವೆ. ಹಾಸಿಗೆ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಆರ್​.ಅಶೋಕ್ ಭರವಸೆ ನೀಡಿದ್ದಾರೆ.

ABOUT THE AUTHOR

...view details