ಕರ್ನಾಟಕ

karnataka

ETV Bharat / city

ಮತದಾನ ಮಾಡಿದ ಕೋವಿಡ್ ಪಾಸಿಟಿವ್ ವ್ಯಕ್ತಿ - ರಾಜರಾಜೇಶ್ವರಿ ನಗರ ಉಪಚುನಾವಣೆ ಕೊರೊನಾ ಸೋಂಕಿತರ ಮತದಾನ

43 ವರ್ಷದ ಕೋವಿಡ್ ಸೋಂಕಿತ ವ್ಯಕ್ತಿ ಯಶವಂತಪುರದ ಆನಂದ್ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಯ ಮತಗಟ್ಟೆಗೆ ಪಿಪಿಇ ಕಿಟ್​ ಧರಿಸಿ ಬಂದು ಮತದಾನ ಮಾಡಿದರು.

corona infected patient did voting in Rajarajeshwari nagar
ಕೊರೊನಾ ಸೋಂಕಿತರ ಮತದಾನ

By

Published : Nov 3, 2020, 6:42 PM IST

ಬೆಂಗಳೂರು:ಯಶವಂತಪುರದ ಆನಂದ್ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಯ ಮತಗಟ್ಟೆಯಲ್ಲಿ 43 ವರ್ಷದ ಕೋವಿಡ್ ಸೋಂಕಿತ ವ್ಯಕ್ತಿ ಮತ ಚಲಾಯಿಸಿದರು. ಸಿಬ್ಬಂದಿ ಮತ್ತು ಸೋಂಕಿತ ವ್ಯಕ್ತಿಯೂ ಸಹ ಪಿಪಿಇ ಕಿಟ್ ಧರಿಸಿ ಆಂಬುಲೆನ್ಸ್​ನಲ್ಲಿ ಬಂದು ಮತ ಚಲಾಯಿಸಿದರು.

ಕೋವಿಡ್ ಪಾಸಿಟಿವ್ ವ್ಯಕ್ತಿಯ ಮತದಾನದ ಬಳಿಕ ಮತಗಟ್ಟೆಯನ್ನು ಸ್ಯಾನಿಟೈಸ್ ಮಾಡಲಾಯಿತು. ಇನ್ನೂ ಅರ್ಧ ಗಂಟೆ ಮತದಾನಕ್ಕೆ ಕಾಲಾವಕಾಶ ಇದ್ದಿದ್ದರಿಂದ ಸಾರ್ವಜನಿಕರಿಗೆ ಮತದಾನಕ್ಕೆ ಅವಕಾಶ ನೀಡಲಾಯಿತು. ಆದ್ರೆ ಯಾವುದೇ ಮತದಾರರು ಬಂದಿಲ್ಲ.

ಚುನಾವಣಾ ಆರೋಗದ ಎಡವಟ್ಟು

ಆರ್.ಆರ್. ನಗರ ಬಿಇಟಿ ಸ್ಕೂಲ್​ನಲ್ಲಿ ಚುನಾವಣಾ ಆಯೋಗ ಮಹಾ ಎಡವಟ್ಟು ಮಾಡಿದೆ ಎನ್ನಲಾಗಿದೆ. ಕೊರೊನಾ ರೋಗಿ ವೋಟಿಂಗ್ ಮುನ್ನ ಇದ್ದ ಕಾಳಜಿ ವೋಟಿಂಗ್ ನಂತರ ಇರಲಿಲ್ಲ. ಚುನಾವಣಾ ಸಿಬ್ಬಂದಿ ಪಿಪಿಇ ಕಿಟ್ ತೆಗೆದು ಸ್ಯಾನಿಟೈಸ್ ಮಾಡುವ ಮೊದಲೇ ಮತದಾರರು ಓಡಾಟ ನಡೆಸಿದರು. ಸಿಬ್ಬಂದಿ ಪಿಪಿಇ ಕಿಟ್ ಚೇಂಜ್ ಮಾಡುವ ಜಾಗದಲ್ಲೇ ಹಿರಿಯ ಮತದಾರರು ಓಡಾಟ ನಡೆಸಿರುವುದು ಕಂಡು ಬಂದಿದೆ.

ABOUT THE AUTHOR

...view details