ಕರ್ನಾಟಕ

karnataka

ETV Bharat / city

‌ಕೊರೊನಾ ಹೆಚ್ಚಳ.. ಆರೋಗ್ಯ ಇಲಾಖೆಯಿಂದ ಹೋಮ್ ಐಸೋಲೇಶನ್​ಗೆ ಹೊಸ ಮಾರ್ಗಸೂಚಿ.. - ‌ಕೊರೊನಾ ಹೆಚ್ಚಳ

ಡೆಲಿವರಿಗೆ ಎರಡು ವಾರ ಇರೋ ಗರ್ಭಿಣಿಯರಿಗೆ ಹೋಮ್ ಐಸೋಲೇಶನ್ ‌ಇರೋದಿಲ್ಲ. ಬಾಣಂತಿಯರಿಗೆ ವೈದ್ಯರು ತಿಳಿಸಿದ್ದರೆ ಹೋಮ್ ಐಸೋಲೇಶನ್ ಇರಬಹುದು. ಎಂದಿನಂತೆ ಹೋಮ್ ಐಸೋಲೇಶನ್​ಗೆ ಪ್ರತ್ಯೇಕ ಕೊಠಡಿ, ಪ್ರತ್ಯೇಕ ಶೌಚಾಲಯ ‌ಕಡ್ಡಾಯ ಇರಬೇಕಿದೆ.‌‌.

ಹೋಮ್ ಐಸೋಲೇಶನ್
ಹೋಮ್ ಐಸೋಲೇಶನ್

By

Published : Apr 20, 2021, 5:29 PM IST

ಬೆಂಗಳೂರು :ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಕೋವಿಡ್ ಎರಡನೇ ಅಲೆಯ ಆರ್ಭಟ ಜೋರಾಗಿದೆ. ಹೋಮ್ ಐಸೋಲೇಶನ್​ಗೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ರೋಗ‌ ಲಕ್ಷಣ ಇಲ್ಲದವರು, ಸಾಧಾರಣ ಲಕ್ಷಣ ಇರುವವರು ಮನೆಯಲ್ಲಿದ್ದು ಚಿಕಿತ್ಸೆ ಪಡೆಯಬೇಕು. ಮನೆಯಲ್ಲೇ ದೂರವಾಣಿ ಮೂಲಕ ಚಿಕಿತ್ಸೆ ಪಡೆಯಲು ಸೂಚನೆ ನೀಡಲಾಗಿದೆ. ಮನೆಯಲ್ಲಿ ಪ್ರತ್ಯೇಕವಾಗಿರಲು‌ ಅನುಕೂಲವಿದ್ದವರು ಹೋಮ್ ಐಸೋಲೇಶನ್ ಇರಬೇಕು.

ಆಕ್ಸಿಜನ್ ಸ್ಯಾಚುರೇಷನ್ (ಆಮ್ಲಜನಕದ ಶುದ್ಧತ್ವ) 95ಕ್ಕಿಂತ ಮೇಲ್ಪಟ್ಟವರಿಗೆ ಮನೆಯಲ್ಲಿ ಐಸೋಲೇಶನ್ ‌ಕಡ್ಡಾಯ ಮಾಡಲಾಗಿದೆ. ಗಂಭೀರ‌‌ ಲಕ್ಷಣವಿಲ್ಲದ ಕೋ ಮಾರ್ಬಿಡ್ (ಕೋವಿಡ್​ ಜೊತೆಗೆ ಇತರೆ ರೋಗ) ಸೋಂಕಿತರನ್ನ ವೈದ್ಯರು ದೃಢಪಡಿಸಿದ್ರೆ ಹೋಮ್ ಐಸೋಲೇಶನ್ ‌ಇರಬಹುದು. ಸೆಲ್ಫ್​ ಹೋಮ್ ಐಸೋಲೇಶನ್ ಇರುವವರು ಟೆಲಿ‌ ಮಾನಿಟರಿಂಗ್ ಟೀಂ​ಗೆ ಮಾಹಿತಿ ನೀಡಬೇಕು.

ಆರೋಗ್ಯ ಇಲಾಖೆಯಿಂದ ಹೋಮ್ ಐಸೋಲೇಶನ್​ಗೆ ಹೊಸ ಮಾರ್ಗಸೂಚಿ
ಆರೋಗ್ಯ ಇಲಾಖೆಯಿಂದ ಹೋಮ್ ಐಸೋಲೇಶನ್​ಗೆ ಹೊಸ ಮಾರ್ಗಸೂಚಿ

ಡೆಲಿವರಿಗೆ ಎರಡು ವಾರ ಇರೋ ಗರ್ಭಿಣಿಯರಿಗೆ ಹೋಮ್ ಐಸೋಲೇಶನ್ ‌ಇರೋದಿಲ್ಲ. ಬಾಣಂತಿಯರಿಗೆ ವೈದ್ಯರು ತಿಳಿಸಿದ್ದರೆ ಹೋಮ್ ಐಸೋಲೇಶನ್ ಇರಬಹುದು. ಎಂದಿನಂತೆ ಹೋಮ್ ಐಸೋಲೇಶನ್​ಗೆ ಪ್ರತ್ಯೇಕ ಕೊಠಡಿ, ಪ್ರತ್ಯೇಕ ಶೌಚಾಲಯ ‌ಕಡ್ಡಾಯ ಇರಬೇಕಿದೆ.‌‌

ABOUT THE AUTHOR

...view details