ಬೆಂಗಳೂರು: ರಾಖಿ ಹಬ್ಬ ಎಂದರೆ ಅಣ್ಣ ತಂಗಿಯ ಬಾಂಧವ್ಯದ ಸಂಕೇತ. ಆದರೆ ಈ ಬಾರಿ ಕೊರೊನಾ ಹಾಗೂ ಚೀನಾ ಬಿಕ್ಕಟ್ಟಿನಿಂದ ರಾಖಿ ದಾರ ಖರೀದಿಯ ಭರಾಟೆ ಎಂದಿನಂತೆ ಇರುವುದಿಲ್ಲ ಎಂದು ವರ್ತಕರು ಅಂದಾಜಿಸುತ್ತಿದ್ದಾರೆ.
ಈ ಬಾರಿ ನಿರಂತರ ಲಾಕ್ ಡೌನ್ ಇದ್ದ ಹಿನ್ನೆಲೆಯಲ್ಲಿ ಜನರ ಬಳಿ ಹಣವಿಲ್ಲ. 10 ರೂಪಾಯಿ ಮುಖಬೆಲೆಯ ರಾಖಿ ಮಾರಾಟವಾಗಬಹುದು, ಆದರೆ ದುಬಾರಿ ರಾಖಿಯ ಮಾರಾಟ ನಿರೀಕ್ಷೆಯಿಲ್ಲ ಎಂದು ಚಿಕ್ಕಪೇಟೆ ಚಿಲ್ಲರೆ ಜವಳಿ ಅಂಗಡಿಗಳ ಸಂಘದ ಉಪಾಧ್ಯಕ್ಷ ರಾಜಪುರೋಹಿತ್ ತಿಳಿಸಿದರು.