ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟ: ಒಂದೇ ದಿನ 11,265 ಮಂದಿಗೆ ಸೋಂಕು ದೃಢ - explosion in the state

ಮಹಾಮಾರಿಗೆ ರಾಜ್ಯದಲ್ಲಿಂದು 38 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 13,046ಕ್ಕೆ ಏರಿಕೆ ಆಗಿದೆ. 4,364 ಮಂದಿ ಗುಣಮುಖರಾಗಿದ್ದು ಈವರೆಗೂ 9,96,367 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.

ಕೊರೊನಾ
ಕೊರೊನಾ

By

Published : Apr 14, 2021, 7:18 PM IST

ಬೆಂಗಳೂರು:ರಾಜ್ಯದಲ್ಲಿಂದು ಮತ್ತೊಮ್ಮೆ ಕೊರೊನಾ ವಿಸ್ಟೋಟಗೊಂಡಿದ್ದು ಇಂದು ಒಂದೇ ದಿನ 11,265 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 10,94,912 ಕ್ಕೆ ಏರಿಕೆ ಆಗಿದೆ.

ಮಹಾಮಾರಿಗೆ 38 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 13,046ಕ್ಕೆ ಏರಿಕೆ ಆಗಿದೆ. 4,364 ಮಂದಿ ಗುಣಮುಖರಾಗಿದ್ದು ಈವರೆಗೂ 9,96,367 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.

ಇತ್ತ ಮತ್ತೆ ಸಕ್ರಿಯ ಪ್ರಕರಣಗಳು 85,480ಕ್ಕೆ ಏರಿದ್ದು 506 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ರಾಜ್ಯದಲ್ಲಿ ಸೋಂಕಿತ ಪ್ರಕರಣಗಳ ಶೇ 9.94 ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.33 ರಷ್ಟು ಇದೆ. ವಿಮಾನ ನಿಲ್ದಾಣದಿಂದ 980 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 8 ಸಾವಿರ ದಾಟಿದ ಕೋವಿಡ್‌ ಪ್ರಕರಣಗಳು

ಕೋವಿಡ್ ಎರಡನೇ ಅಲೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ ಎಂಟು ಸಾವಿರ ದಾಟಿದೆ. ನಗರದಲ್ಲಿಂದು 8,155 ಜನರಲ್ಲಿ ಕೊರೊನಾ ದೃಢಪಟ್ಟಿದೆ. 23 ಮಂದಿ ಕೋವಿಡ್​ಗೆ ಬಲಿಯಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 4,933ಕ್ಕೆ‌ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 5,02,024ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ..ಮತ್ತೆ ಲಾಕ್​ಡೌನ್​ ಜಾರಿಯಾದರೆ ದೇಶಕ್ಕಾಗುವ ಆರ್ಥಿಕ ನಷ್ಟ ಎಷ್ಟು ಗೊತ್ತೇ?

ABOUT THE AUTHOR

...view details