ಕರ್ನಾಟಕ

karnataka

ETV Bharat / city

ಆಟೋಮೊಬೈಲ್ ಕ್ಷೇತ್ರ ಕೊರೊನಾದಿಂದ ತತ್ತರ: ಜುಲೈ ತಿಂಗಳಿಂದ ಅಲ್ಪ ಸುಧಾರಣೆ - ಸುಜುಕಿ

ಆಟೋಮೊಬೈಲ್ ಕ್ಷೇತ್ರದ ಬಗ್ಗೆ ಈಟಿವಿ ಭಾರತಕ್ಕೆ ವಿಶ್ಲೇಷಣೆ ನೀಡಿದ ಆರ್ಥಿಕ ತಜ್ಞ ನಿತ್ಯಾನಂದ, ಕೋವಿಡ್ ಹಾಗೂ ಭಾರತ, ಚೀನಾ ಗಡಿ ಸಮಸ್ಯೆಯಿಂದ ಉಪಕರಣಗಳ ಸರಬರಾಜಿನಲ್ಲಿ ಸಮಸ್ಯೆಯಾಗಿದ್ದು ಆಟೋಮೊಬೈಲ್​ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ.

automobile industry
ಆಟೋಮೊಬೈಲ್ ಕ್ಷೇತ್ರ

By

Published : Aug 12, 2020, 6:19 PM IST

ಬೆಂಗಳೂರು:ಎಲ್ಲಾ ಕ್ಷೇತ್ರಗಳ ಮೇಲೂ ಕೂಡಾ ಮಹಾಮಾರಿ ಕೊರೊನಾ ವಕ್ರದೃಷ್ಟಿ ಹರಿಸುತ್ತಿದೆ. ಆಟೋಮೊಬೈಲ್​ ಕ್ಷೇತ್ರ ಕೂಡಾ ಇದಕ್ಕೆ ಹೊರತಲ್ಲ. ದ್ವಿಚಕ್ರ, ತ್ರಿಚಕ್ರ ವಾಹನ ಹಾಗೂ ಕಾರುಗಳ ರಫ್ತಿನಲ್ಲಿ ಅಗ್ರರಾಷ್ಟ್ರಗಳಲ್ಲೊಂದಾಗಿದ್ದ ಭಾರತ ಕೊರೊನಾ ನಂತರ ಆಟೋಮೊಬೈಲ್​ ಕ್ಷೇತ್ರದಲ್ಲಿ ಕೊರೊನಾದಿಂದಾಗಿ ತನ್ನ ಪಾರಮ್ಯ ಕಳೆದುಕೊಂಡಿತು. ಇದರ ನೇರ ಪರಿಣಾಮ ಆಗಿದ್ದು ಇಲ್ಲಿನ ಕೈಗಾರಿಕೆಗಳ ಮೇಲೆ.

ಆಟೋಮೊಬೈಲ್ ಕ್ಷೇತ್ರ

2018ರಲ್ಲಿ ಕುಸಿತದ ಹಾದಿ ಹಿಡಿದ ಆಟೋಮೊಬೈಲ್ ಕ್ಷೇತ್ರ, ವಿದ್ಯುತ್ ಚಾಲಿತ ವಾಹನ ಆಗಮನ ಹಾಗೂ ಬಿಎಸ್ 4 ಎಂಜಿನ್ ಅಂತ್ಯದಿಂದ ಉತ್ಪಾದನೆ ಹಾಗೂ ಬೇಡಿಕೆ ಕ್ಷೀಣಿಸಿತ್ತು. 2020ರ ಮಾರ್ಚ್ ತಿಂಗಳಿಂದ ಕೊರೊನಾ ಸಮಸ್ಯೆ ದೇಶದಲ್ಲಿ ಪ್ರಾರಂಭವಾಗಿ, ಆಟೋಮೊಬೈಲ್ ಕ್ಷೇತ್ರಕ್ಕೆ ಕೊಡಲಿ ಪೆಟ್ಟು ನೀಡಿದೆ.

ಬಜಾಜ್, ಟಿವಿಎಸ್, ಟಾಟಾ ಸುಜುಕಿ ಸೇರಿದಂತೆ ದೊಡ್ಡ ಕಾರ್ಖಾನೆಗಳಲ್ಲಿ ತಯಾರಾದ ವಾಹನಗಳಿಗೆ ಏಷಿಯಾ, ಯುರೋಪ್ ದೇಶಗಳಲ್ಲಿ ಬೇಡಿಕೆ ಹೆಚ್ಚಿತ್ತು. ಕೊರೊನಾ ನಂತರದ ಸಂದರ್ಭದಲ್ಲಿ ವಿಶ್ವದಲ್ಲಿ ವಾಹನಗಳ ಬೇಡಿಕೆ ಇಳಿಮುಖವಾಗಿದ್ದು, ಅದರ ನೇರ ಪರಿಣಾಮ ಭಾರತದ ಕೈಗಾರಿಕೆಗಳ ಮೇಲಾಗಿದೆ.

ಇತಿಹಾಸದಲ್ಲಿ ಮೊದಲ ಬಾರಿಗೆ 2020ರ ಏಪ್ರಿಲ್ ತಿಂಗಳಲ್ಲಿ ಆಟೋಮೊಬೈಲ್ ಕ್ಷೇತ್ರ ಶೂನ್ಯ ಮಾರಾಟ ಅನುಭವಿಸಿತ್ತು. ಜುಲೈ ತಿಂಗಳಲ್ಲಿ 1,97,523 ಪ್ರಯಾಣಿಕ ಶ್ರೇಣಿಯ ಕಾರುಗಳನ್ನ ಮಾರಾಟ ಮಾಡಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ.

ಐಸಿಆರ್​ಎ ರೇಟಿಂಗ್ ಸಂಸ್ಥೆಯ ಪ್ರಕಾರ ಈ ಆರ್ಥಿಕ ವರ್ಷದಲ್ಲಿ ಪ್ರಯಾಣಿಕ ಶ್ರೇಣಿಯ ವಾಹನ ಮಾರಾಟದಲ್ಲಿ 22%ರಿಂದ 25% ಇಳಿಯಲಿದ್ದು, ದ್ವಿಚಕ್ರ ವಾಹನ ಮಾರಾಟ 16-18% ಇಳಿಯಲಿದೆ. ಟೊಯೊಟಾ ಜೊತೆ ಸಹಬಾಗಿತ್ವದಲ್ಲಿ ರಫ್ತಿನ ಮೇಲೆ ಹೆಚ್ಚು ಗಮನ ನೀಡಲಾಗುವುದು ಎಂದು ಸುಜುಕಿ ಮೋಟಾರ್ ಕಾರ್ಪ್ 20ರ ಆರ್ಥಿಕ ಘೋಷಣೆಯ ಸಂದರ್ಭದಲ್ಲಿ ಹೇಳಿದೆ.

ತಮಿಳುನಾಡು ಮೂಲದ ಟಿವಿಎಸ್ ಸಂಸ್ಥೆ ವಿಶ್ವದಲ್ಲಿ ಕೊರೊನಾ ದೆಸೆಯಿಂದ ಆರ್ಥಿಕ ಕಗ್ಗಂಟು ಉಂಟಾಗಿದೆ. ಆದರೆ ಆಫ್ರಿಕಾ ಖಂಡದಲ್ಲಿ ಅಷ್ಟರ ಮಟ್ಟಿಗೆ ಕೊರೊನಾ ಅಟ್ಟಹಾಸ ಇಲ್ಲ ಎಂದು ಹೇಳಿ ಸಂಸ್ಥೆಯ ಮುಂದಿನ ವ್ಯವಹಾರದ ಬಗ್ಗೆ ಸುಳಿವು ನೀಡಿದೆ.

ಆಟೋಮೊಬೈಲ್ ಕ್ಷೇತ್ರದ ಬಗ್ಗೆ ಈಟಿವಿ ಭಾರತಕ್ಕೆ ವಿಶ್ಲೇಷಣೆ ನೀಡಿದ ಆರ್ಥಿಕ ತಜ್ಞ ನಿತ್ಯಾನಂದ ಕೋವಿಡ್ ಹಾಗೂ ಭಾರತ, ಚೀನಾ ಗಡಿ ಸಮಸ್ಯೆಯಿಂದ ಉಪಕರಣಗಳ ಸರಬರಾಜಿನಲ್ಲಿ ಸಮಸ್ಯೆಯಾಗಿದೆ. ನಿರುದ್ಯೋಗ ಸಮಸ್ಯೆಯಿಂದ ಜನರು ವಾಹನ ಖರೀದಿಗೆ ಮುಂದಾಗುತ್ತಿಲ್ಲ. ಕೊರೊನಾಗೆ ಲಸಿಕೆ ಅಥವಾ ಪರಿಹಾರದ ಜೊತೆಗೆ ಉದ್ಯೋಗ ಸೃಷ್ಟಿ ಆದರೆ ಮಾತ್ರ ಆಟೋಮೊಬೈಲ್ ಕ್ಷೇತ್ರ ಸುಧಾರಣೆ ಆಗಲಿದೆ ಎಂದರು.

ABOUT THE AUTHOR

...view details