ಕರ್ನಾಟಕ

karnataka

ETV Bharat / city

ಕೊರೊನಾಗೆ ಬಲಿಯಾದ ಹಿರಿಯ ಪತ್ರಕರ್ತ ಸೋಮಶೇಖರ ಯಡವಟ್ಟಿ: ಸಿಎಂ, ಡಿಸಿಎಂ ಸಂತಾಪ - ಸಿಎಂ, ಡಿಸಿಎಂ ಸಂತಾಪ

ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ 8:30ರ ಸಮಯದಲ್ಲಿ ಕೊನೆಯುಸಿರೆಳೆದರು. ಅನಾರೋಗ್ಯದಿಂದಾಗಿ ಇತ್ತೀಚೆಗಷ್ಟೇ ತಪಾಸಣೆಗೆ ಒಳಗಾದ ಸಂದರ್ಭ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ತಿಳಿದು ಬಂದಿತ್ತು.

Corona death veteran journalist Somashekhara Yadavatti
ಕೊರೊನಾಗೆ ಬಲಿಯಾದ ಹಿರಿಯ ಪತ್ರಕರ್ತ ಸೋಮಶೇಖರ ಯಡವಟ್ಟಿ: ಸಿಎಂ, ಡಿಸಿಎಂ ಸಂತಾಪ

By

Published : Aug 16, 2020, 3:45 PM IST

ಬೆಂಗಳೂರು: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕದ ಮುಖ್ಯ ವರದಿಗಾರರಾಗಿದ್ದ ಸೋಮಶೇಖರ ಯಡವಟ್ಟಿ (51) ಭಾನುವಾರ ಬೆಳಗ್ಗೆ ನಿಧನರಾದರು.

ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ 8:30ರ ಸಮಯದಲ್ಲಿ ಕೊನೆಯುಸಿರೆಳೆದರು. ಅನಾರೋಗ್ಯದಿಂದಾಗಿ ಇತ್ತೀಚೆಗಷ್ಟೇ ತಪಾಸಣೆಗೆ ಒಳಗಾದ ಸಂದರ್ಭ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ತಿಳಿದು ಬಂದಿತ್ತು. ಇದಕ್ಕೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸರಳ, ಸಹೃದಯಿ ವ್ಯಕ್ತಿತ್ವದ ಸೋಮಶೇಖರ ಯಡವಟ್ಟಿ ಧಾರವಾಡ ಗುಲಗಂಜಿಕೊಪ್ಪ ಮೂಲದವರು. ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲ ಪತ್ರಕರ್ತರಾಗಿದ್ದ ಅವರು, 15 ವರ್ಷ ಸಂಯುಕ್ತ ಕರ್ನಾಟಕದಲ್ಲಿ ಹಿರಿಯ ವರದಿಗಾರ, ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೆ ಮೊದಲು ಜನವಾಹಿನಿ, ಕರುನಾಡ ಸಂಜೆ, ಕನ್ನಡಮ್ಮ, ಹಸಿರು ಕ್ರಾಂತಿ ಮೊದಲಾದ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಮಂಗಳೂರು ಪ್ರೆಸ್ ಕ್ಲಬ್ ನ ಸದಸ್ಯರಾಗಿದ್ದ ಯಡವಟ್ಟಿ ಅವರು, ಈ ಮೊದಲು ಕ್ಲಬ್ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದರು.

ಮೃತರು ಪತ್ನಿ ಪುತ್ರ ಹಾಗೂ ಪುತ್ರಿ ಮತ್ತು ಅಪಾರ ಬಂಧು ವರ್ಗವನ ಅಗಲಿದ್ದಾರೆ. ಪತ್ರಿಕೋದ್ಯಮದಲ್ಲಿ ಅವರ ಆಪ್ತ ವಲಯವನ್ನು ಹೊಂದಿದ್ದ ಅವರ ಅಗಲಿಕೆಗೆ ಮಾಧ್ಯಮ ಮಿತ್ರರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿಎಂ, ಡಿಸಿಎಂ ಸಂತಾಪ:

ಸಂಯುಕ್ತ ಕರ್ನಾಟಕದ ಹಿರಿಯ ಪತ್ರಕರ್ತ ಸೋಮಶೇಖರ್ ಯಡವಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೊರೊನಾಗೆ ಬಲಿಯಾದ ಹಿರಿಯ ಪತ್ರಕರ್ತ ಸೋಮಶೇಖರ ಯಡವಟ್ಟಿ: ಸಿಎಂ, ಡಿಸಿಎಂ ಸಂತಾಪ

ಸರಳ, ಸಜ್ಜನ ವ್ಯಕ್ತಿ ಯಾಗಿದ್ದ ಅವರು ತಮ್ಮ ನಿಷ್ಪಕ್ಷಪಾತ ಹಾಗೂ ವಸ್ತುನಿಷ್ಠ ವರದಿಗಾರಿಕೆಯಿಂದ ಹೆಸರುವಾಸಿಯಾಗಿದ್ದರು. ಇತ್ತೀಚೆಗೆ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನನ್ನ ಸಂದರ್ಶನ ಮಾಡಿದ್ದು, ನನ್ನ ನೆನಪಿನಂಗಳದಲ್ಲಿ ಇನ್ನೂ ಹಚ್ಚ ಹಸಿರಾಗಿದೆ. ಯಡವಟ್ಟಿ ಅವರ ನಿಧನದಿಂದ ಮಾಧ್ಯಮ ಕ್ಷೇತ್ರದ ಅತ್ಯುತ್ತಮ ಪತ್ರಕರ್ತರೊಬ್ಬರನ್ನು ಕಳೆದುಕೊಂಡಂತಾಗಿದೆ. ಭಗವಂತ ಮೃತರ ಆತ್ಮಕ್ಕೆ ಶಾಂತಿಯನ್ನು ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಕೊರೊನಾಗೆ ಬಲಿಯಾದ ಹಿರಿಯ ಪತ್ರಕರ್ತ ಸೋಮಶೇಖರ ಯಡವಟ್ಟಿ: ಸಿಎಂ, ಡಿಸಿಎಂ ಸಂತಾಪ

ಸಂಯುಕ್ತ ಕರ್ನಾಟಕ ಪತ್ರಿಕೆಯ ಮುಖ್ಯ ವರದಿಗಾರರಾಗಿದ್ದ ಸೋಮಶೇಖರ ಯಡವಟ್ಟಿ ಅವರು ನಿಧನರಾಗಿರುವ ಸುದ್ದಿ ತಿಳಿದು ನನಗೆ ಬೇಸರವಾಯಿತು. ಅವರು ಪತ್ರಿಕೋದ್ಯಮದಲ್ಲಿ ಅತ್ಯಂತ ನಿಷ್ಠರಾಗಿ ಸದಾ ಸಕಾರಾತ್ಮಕವಾಗಿ ವರದಿಗಳನ್ನು, ವಿಶ್ಲೇಷಣೆಗಳನ್ನು ಬರೆಯುತ್ತಿದ್ದನ್ನು ನಾನು ಗಮನಿಸಿದ್ದೇನೆ. ವಿಧಾನಸೌಧದಲ್ಲಿ ಮತ್ತು ಅಧಿವೇಶನಗಳಲ್ಲಿ ಅವರು ಲವಲವಿಕೆಯಿಂದ ಸುದ್ದಿ ಸಂಗ್ರಹದಲ್ಲಿ ಯಾವತ್ತೂ ಚುರುಕಾಗಿರುತ್ತಿದ್ದರು. ತಾನಾಯಿತು ತನ್ನ ಕೆಲಸವಾಯಿತು ಎನ್ನುವ ಮನಸ್ಥಿತಿಯಲ್ಲಿ ಬೆಳೆದು ಬಂದ ಅವರ ನಿಧನ ಪತ್ರಿಕೋದ್ಯಮ ಕ್ಷೇತ್ರಕ್ಕೆ ನಿಜಕ್ಕೂ ದೊಡ್ಡ ನಷ್ಟವೇ ಸರಿ. ದಿವಂಗತರಿಗೆ ನನ್ನ ಅಂತಿಮ ಪ್ರಣಾಮಗಳು ಎಂದು ಡಿಸಿಎಂ ಲಕ್ಷ್ಮಣ ಸವದಿ ಸಂತಾಪ ಸೂಚನೆ ಮಾಡಿದ್ದಾರೆ.

ABOUT THE AUTHOR

...view details