ನೆಲಮಂಗಲ: ನಾಲ್ಕನೇ ಹಂತದ ಲಾಕ್ಡೌನ್ ಅನ್ವಯ, ಮೇ 24ರ ಮೊದಲ ಸಂಪೂರ್ಣಾ ದಿಗ್ಬಂಧನ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಾಹನಗಳ ಓಡಾಟ ಇಲ್ಲದೆ ರಾಷ್ಟ್ರೀಯ ಹೆದ್ದಾರಿ-4 ಭಣಗುತ್ತಿತ್ತು.
ಭಾನುವಾರದ ಕೊರೊನಾ ಕರ್ಫ್ಯೂಗೆ ಭಣಗುಟ್ಟುತ್ತಿರುವ ರಾಷ್ಟ್ರೀಯ ಹೆದ್ದಾರಿ-4
ಕೇಂದ್ರ ಸರ್ಕಾರದ ಲಾಕ್ಡೌನ್ 4.0 ಅನ್ವಯ ಭಾನುವಾರದ ಸಂಪೂರ್ಣ ನಿಷೇಧಾಜ್ಞೆ ರಾಜ್ಯಾದ್ಯಂತ ಕಟ್ಟು ನಿಟ್ಟನಿಂದ ಅನುಷ್ಠಾನಕ್ಕೆ ತರಲಾಗಿದೆ. ಸದಾ ಸಂಚಾರ ದಟ್ಟಣೆಯಿಂದ ಕೂಡಿರುತ್ತಿದ್ದ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಖಾಲಿಯಾಗಿದೆ.
ಕೊರೊನಾ ಕರ್ಪ್ಯೂ
ಅಂತಾರಾಜ್ಯ ವಾಹನಗಳ ಓಡಾಟದಿಂದ ಗಿಜಿಗುಡುತ್ತಿದ್ದ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ-4, ಸ್ಥಳೀಯ ಹಾಗೂ ಅಗತ್ಯ ಸೇವೆಗಳ ವಾಹನಗಳು ಮಾತ್ರ ಓಡಾಡುತ್ತಿವೆ.