ಕರ್ನಾಟಕ

karnataka

ETV Bharat / city

ಹೆಚ್ಚಾದ ಕೊರೊನಾ‌ ಭೀತಿ: ಬೆಂಗಳೂರಲ್ಲಿ ಕಂಟೈನ್ಮೆಂಟ್‌ ಝೋನ್​ಗಳ ಸಂಖ್ಯೆ ಏರಿಕೆ - precautions to prevent corona

ಬೆಂಗಳೂರಿನ‌ಲ್ಲಿ ಸೋಂಕು ಹೆಚ್ಚಳವಾದ ಕಾರಣ ಕಂಟೈನ್ಮೆಂಟ್ ಝೋನ್‌ಗಳು ಹೆಚ್ಚಾಗಿದೆ. ಈ ಮೊದಲು 160 ಕಂಟೈನ್ಮೆಂಟ್ ಝೋನ್‌ಗಳು ಇದ್ದ ಬಿಬಿಎಂಪಿಯಲ್ಲಿ ಇದೀಗ 166 ಕಂಟೈನ್ಮೆಂಟ್ ಝೋನ್‌ಗಳಿವೆ.

corona-containment-zone-increased-in-bengaluru
corona-containment-zone-increased-in-bengaluru

By

Published : Aug 12, 2021, 3:06 PM IST

ಬೆಂಗಳೂರು:ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುವು ಭೀತಿ ಹೆಚ್ಚಾಗಿದ್ದು, ಪಾಲಿಕೆ ಎಲ್ಲಾ ರೀತಿಯಲ್ಲೂ ಮುಂಜಾಗ್ರತಾ ಕ್ರಮ‌ ಹಾಗೂ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳುತ್ತಿದೆ. ನಗರದಲ್ಲಿ ಯಾವ ಪ್ರದೇಶ ಹೆಚ್ಚು ಅಪಾಯದಲ್ಲಿದೆ ಎಂಬುದನ್ನ ಗುರುತಿಸಿ, ಆ ಪ್ರದೇಶಕ್ಕೆ ಏನೆಲ್ಲಾ ಕ್ರಮಗಳನ್ನ ತೆಗೆದುಕೊಳ್ಳಬೇಕೆಂಬುದನ್ನ ನಿರ್ಧರಿಸಿದೆ.

ಬೆಂಗಳೂರಿನ‌ಲ್ಲಿ ಸೋಂಕು ಹೆಚ್ಚಳವಾದ ಕಾರಣ ಕಂಟೈನ್ಮೆಂಟ್ ಝೋನ್‌ಗಳು ಹೆಚ್ಚಾಗಿವೆ. ಬಿಬಿಎಂಪಿ ಈಗಾಗಲೇ ಸೋಂಕು ಹರಡದಂತೆ ತಡೆಯಲು ಕಂಟೈನ್ಮೆಟ್ ಝೋನ್‌ಗಳನ್ನ ಗುರುತು ಮಾಡಿದೆ. ಈ ಮೊದಲು 160 ಕಂಟೈನ್ಮೆಂಟ್ ಝೋನ್‌ಗಳು ಇದ್ದ ಬಿಬಿಎಂಪಿಯಲ್ಲಿ ಇದೀಗ 166 ಕಂಟೈನ್ಮೆಂಟ್ ಝೋನ್‌ಗಳಿವೆ. ಹೀಗೆ ಒಂದೇ ದಿನದಲ್ಲಿ ಆರು ಕಂಟೈನ್ಮೆಂಟ್ ಝೋನ್‌ಗಳು ಹೆಚ್ಚಳವಾಗಿವೆ.

ಏರಿಕೆಯಾದ ಕಂಟೈನ್ಮೆಂಟ್‌ ಝೋನ್

166 ಕಂಟೈನ್ಮೆಂಟ್ ಝೋನ್‌ಗಳಲ್ಲಿ 687 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅದ್ರಲ್ಲೂ ಅಪಾರ್ಟ್​ಮೆಂಟ್​ಗಳೇ ಕೊರೊನಾ ಹಾಟ್​ಸ್ಪಾಟ್​ಗಳಾಗಿದ್ದು, 166 ಕಂಟೈನ್ಮೆಂಟ್ ಝೋನ್‌ಗಳ ಪೈಕಿ 82 ಅಪಾರ್ಟ್ಮೆಂಟ್‌ಗಳೇ ಇವೆ. ಇದರ ಜೊತೆಗೆ 73 ಪ್ರತ್ಯೇಕ ಮನೆಗಳನ್ನು ಕಂಟೈನ್ಮೆಂಟ್ ಝೋನ್​ಗಳಾಗಿ ಬಿಬಿಎಂಪಿ ಗುರುತಿಸಿದೆ. 1 ಶಾಲೆ, 8 ಪಿಜಿಗಳನ್ನು ಕಂಟೈನ್ಮೆಂಟ್ ಝೋನ್ ಆಗಿ ಗುರುತಿಸಲಾಗಿದೆ.

ಮಹದೇವಪುರ ವಲಯದ ಅಪಾರ್ಟ್​ಮೆಂಟ್​ಗಳೇ ಕೊರೊನಾ ಹಾಟ್ ಸ್ಪಾಟ್‌ಗಳಾಗಿದ್ದು, 42 ಕಂಟೈನ್ಮೆಂಟ್ ಝೋನ್ ಇದ್ದ ಮಹದೇವಪುರ ವಲಯದಲ್ಲೀಗ 46 ಕಂಟೈನ್ಮೆಂಟ್ ಝೋನ್‌ಗಳಾಗಿವೆ. 36 ಕಂಟೈನ್ಮೆಂಟ್ ಝೋನ್ ಇದ್ದ ಪೂರ್ವ ವಲಯದಲ್ಲೀಗ 38 ಝೋನ್‌ಗಳಾಗಿವೆ.

ಉಳಿದಂತೆ ಮಹದೇವಪುರ ವಲಯದಲ್ಲೀಗ 26 ಕಂಟೈನ್ಮೆಟ್ ಝೋನ್‌ಗಳು, ದಕ್ಷಿಣ ವಲಯದಲ್ಲಿ 26 ಕಂಟೈನ್ಮೆಂಟ್ ಝೋನ್‌ಗಳು, ಯಲಹಂಕ ವಲಯದಲ್ಲೀಗ 22 ಕಂಟೈನ್ಮೆಂಟ್ ಝೋನ್‌ಗಳು, ಆರ್ ಆರ್ ನಗರ ವಲಯದಲ್ಲಿ 7 ಕಂಟೈನ್ಮೆಂಟ್ ಝೋನ್‌ಗಳು, ಪಶ್ಚಿಮ ವಲಯದಲ್ಲಿ 10 ಕಂಟೈನ್ಮೆಂಟ್ ಝೋನ್‌ಗಳು, ಬೊಮ್ಮನಹಳ್ಳಿಯಲ್ಲೀಗ 16 ಕಂಟೈನ್ಮೆಂಟ್ ಝೋನ್‌ಗಳು, ದಾಸರಹಳ್ಳಿ ವಲಯದಲ್ಲಿ 1 ಕಂಟೈನ್ಮೆಂಟ್ ಝೋನ್‌ ಇದೆ.

ABOUT THE AUTHOR

...view details