ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು ಕೊರೊನಾಗೆ 106 ಮಂದಿ ಬಲಿ: 8,852 ಪಾಸಿಟಿವ್ ಕೇಸ್ ದೃಢ - ಕೊರೊನಾ ವೈರಸ್​

ರಾಜ್ಯದಲ್ಲಿ ಇಂದು ಪತ್ತೆಯಾದ ಕೊರೊನಾ ವೈರಸ್‌ ಸೋಂಕಿತ ಪ್ರಕರಣಗಳು, ಗುಣಮುಖರಾದವರು ಹಾಗು ಸಾವಿಗೀಡಾದವರೂ ಸೇರಿದಂತೆ ಇಲ್ಲಿವರೆಗಿನ ವಿವರ ಇಲ್ಲಿದೆ.

Karnataka corona updates
ಕೋವಿಡ್​​-19 ವರದಿ

By

Published : Aug 30, 2020, 7:30 PM IST

ಬೆಂಗಳೂರು: ರಾಜ್ಯದಲ್ಲಿ ಇಂದು 66,957 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, 8,852 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

7,101 ಜನರು ಸೋಂಕಿನಿಂದ ಗುಣಮುಖರಾಗಿದ್ದು, 2,42,229 ಜನರು ಈವರೆಗೆ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿತರ ಸಂಖ್ಯೆ 3,35,928 ಕ್ಕೆ ಏರಿಕೆ ಆಗಿದ್ದು ಸದ್ಯ 88,091 ಸಕ್ರಿಯ ಪ್ರಕರಣಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 730 ಮಂದಿ ತೀವ್ರ ನಿಗಾ ಘಟಕದ ಆರೈಕೆಯಲ್ಲಿದ್ದಾರೆ.

ಕಳೆದ 24 ಗಂಟೆಯಲ್ಲಿ 106 ಕೊರೊನಾದಿಂದ ಮೃತರಾಗಿದ್ದು 5,589ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಸಂಪರ್ಕಿತರಲ್ಲಿ 3,79,876 ಜನರು, ದ್ವಿತೀಯ ಸಂಪರ್ಕಿತರಲ್ಲಿ 3,25,886 ಇದ್ದಾರೆ. ಸುಮಾರು 2,67,590 ಜನರು ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ.

ಬೆಂಗಳೂರಿನ ವಿವರ:

ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ನಿಲ್ಲುವ ಹಾಗೆ ಕಾಣ್ತಿಲ್ಲ. ನಿತ್ಯ ಎರಡು ಸಾವಿರದ ಗಡಿ ದಾಟುತ್ತಿದ್ದು, ಇಂದು 2,821 ಹೊಸ ಪಾಸಿಟಿವ್ ಕೇಸ್‌ಗಳು ದೃಢಪಟ್ಟಿದೆ. ಬೆಂಗಳೂರು ಒಂದರಲ್ಲೇ 1,27,263 ಜನರಿಗೆ ಕೊರೊನಾ‌ ದೃಢಪಟ್ಟಿದ್ದು, ಇದರಲ್ಲಿ 87,621 ಜನರು ಗುಣಮುಖರಾಗಿದ್ದಾರೆ. ಇನ್ನು 37,703 ಸಕ್ರಿಯ ಪ್ರಕರಣಗಳಿದ್ದು, 27 ಬಲಿಯಾಗಿದ್ದು 1,938 ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ.

ರಾಜ್ಯಾದ್ಯಂತ 603 ಫೀವರ್ ಕ್ಲಿನಿಕ್​ನಲ್ಲಿ 5,562 ಮಂದಿಗೆ ತಪಾಸಣೆ ನಡೆಸಲಾಗಿದ್ದು ಈವೆರೆಗೆ 24,35,359 ಜನರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. 6,738 ಮಂದಿ ಆಪ್ತ ಸಮಲೋಚನೆಗೆ ಒಳಗಾಗಿದ್ದು, ಮಾನಸಿಕ ಆರೋಗ್ಯ ವಿಭಾಗವೂ ಆತ್ಮಸ್ಥೈರ್ಯ ತುಂಬಿದ್ದಾರೆ.

ABOUT THE AUTHOR

...view details