ಬೆಂಗಳೂರು:ರಾಜ್ಯದಲ್ಲಿಂದು 7,171 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 85 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,47,083 ಕ್ಕೆ ಏರಿಕೆ ಆಗಿದೆ. ಪಾಸಿಟಿವ್ ದರ 1.18% ಕ್ಕೆ ಏರಿಕೆ ಕಂಡಿದೆ. ಇತ್ತ 70 ಸೋಂಕಿತರು ಗುಣಮುಖರಾಗಿದ್ದು, ಈತನಕ 39,05,298 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ. ಈವರೆಗೂ 40,057 ಮೃತಪಟ್ಟಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1686 ರಷ್ಟಿದೆ.
ಬೆಂಗಳೂರಲ್ಲೇ 82 ಪಾಸಿಟಿವ್:ರಾಜ್ಯದಲ್ಲಿ ಪತ್ತೆಯಾದ 85 ಕೇಸ್ಗಳ ಪೈಕಿಬೆಂಗಳೂರಿನಲ್ಲೇ 82 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 17,83,081ಕ್ಕೆ ಏರಿಕೆಯಾಗಿದೆ. 24 ಗಂಟೆ ಅವಧಿಯಲ್ಲಿ 66 ಮಂದಿ ಡಿಸ್ಚಾರ್ಜ್ ಆಗಿದ್ದು, 17,64,492 ಮಂದಿ ಗುಣಮುಖರಾಗಿದ್ದಾರೆ. 1,626 ಸಕ್ರಿಯ ಪ್ರಕರಣಗಳಿವೆ.