ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಕೊರೊನಾ ಇಳಿಕೆಯ ಪರ್ವ.. ಜಿಲ್ಲಾವಾರು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಹೊಸ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಗುಣಮುಖರ ಸಂಖ್ಯೆ ಹೆಚ್ಚಿದೆ. ನಿತ್ಯ ಸಕ್ರಿಯ ಪ್ರಕರಣಗಳ ಸಂಖ್ಯೆಯು ಕಡಿಮೆಯಾಗುತ್ತಿದ್ದು, ಎರಡನೇ ಅಲೆಯ ತೀವ್ರತೆ ನಿಧಾನವಾಗಿ ಇಳಿಮುಖ ಕಾಣುತ್ತಿದೆ. ಕಳೆದೊಂದು ವಾರದ ಸಕ್ರಿಯ ಪ್ರಕರಣಗಳು, ಹೊಸ ಕೇಸ್, ಗುಣಮುಖರ ಅಂಕಿಅಂಶಗಳು ಸಂಪೂರ್ಣ ವಿವರ ಇಲ್ಲಿದೆ ನೋಡಿ..

corona-active-case
ಕೊರೊನಾ ಇಳಿಕೆ

By

Published : Jul 13, 2021, 5:56 PM IST

ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಹೊಡೆತ ಸಾಕಷ್ಟು ಸಾವು-ನೋವಿಗೆ ಕಾರಣವಾಗಿತ್ತು. 50 ಸಾವಿರಕ್ಕೂ ಹೆಚ್ಚು ಜನರಲ್ಲಿ ಪತ್ತೆಯಾಗ್ತಿದ್ದ ಸೋಂಕು, ಇದೀಗ ಸಾವಿರಕ್ಕೆ ಇಳಿದಿದ್ದು, ಹಲವು ಜಿಲ್ಲೆಗಳಲ್ಲಿ ಒಂದಂಕಿ ಸೋಂಕಿತರು ಪತ್ತೆಯಾಗ್ತಿದ್ದಾರೆ. ಇತ್ತ ಸೋಂಕಿತರ ಸಾವಿನ ಸಂಖ್ಯೆಯು ಭಾಗಶಃ ಜಿಲ್ಲೆಯಲ್ಲಿ ಶೂನ್ಯವಾಗಿದೆ.

ನಿತ್ಯ ಒಂದು ಲಕ್ಷ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, 2 ಸಾವಿರದೊಳಗೆ ಹೊಸ ಕೇಸ್ ದೃಢಪಡುತ್ತಿವೆ.‌ ಮೇ 15ರಂದು ಸಕ್ರಿಯ ಪ್ರಕರಣಗಳು ಬರೋಬ್ಬರಿ 6,05,494ಕ್ಕೆ ಏರಿಕೆ ಆಗಿತ್ತು. ಹಾಗೆಯೇ, ಸೋಂಕಿತರ ಪ್ರಕರಣಗಳ ಶೇಕಡವಾರು 35.20%ರಷ್ಟು ಇತ್ತು. ಇದೀಗ ನಿನ್ನೆಯ ಅಂಕಿ-ಅಂಶದ ಪ್ರಕಾರ ಸಕ್ರಿಯ ಪ್ರಕರಣಗಳು 34,858 ಇದ್ದು, ಸೋಂಕಿತರ ಶೇಕಡವಾರು ಶೇ.1.26%ರಷ್ಟು ಇದೆ.

ಕಳೆದೊಂದು ವಾರದ ಸಕ್ರಿಯ ಪ್ರಕರಣಗಳ ಅಂಕಿ-ಅಂಶ

ಹೊಸ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಗುಣಮುಖರ ಸಂಖ್ಯೆ ಹೆಚ್ಚಿದೆ. ನಿತ್ಯ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಎರಡನೇ ಅಲೆಯ ತೀವ್ರತೆ ನಿಧಾನವಾಗಿ ಇಳಿಮುಖ ಕಾಣುತ್ತಿದೆ. ಕಳೆದೊಂದು ವಾರದ ಸಕ್ರಿಯ ಪ್ರಕರಣಗಳು, ಹೊಸ ಕೇಸ್, ಗುಣಮುಖರ ಅಂಕಿ-ಅಂಶಗಳನ್ನ ನೋಡುವುದಾದರೆ..

  • ಸಕ್ರಿಯ ಪ್ರಕರಣಗಳು
ದಿನಾಂಕ ಪ್ರಕರಣಗಳ ಸಂಖ್ಯೆ
6-7-2021 40,016
7-7-2021 39,603
8-7-2021 38,729
9-7-2021 37,906
10-7-2021 37,141
11-7-2021 36,737
12-7-2021 34,858
  • ಸೋಂಕಿನಿಂದ ಗುಣಮುಖರಾದವರ ವಿವರ
ದಿನಾಂಕ ಸೋಂಕಿತರು ಗುಣಮುಖರು
6-7-2021 3104 4992
7-7-2021 2743 3081
8-7-2021 2530 3344
9-7-2021 2290 3045
10-7-2021 2162 2879
11-7-2021 1978 2326
12-7-2021 1386 3204

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪಾಸಿಟಿವಿಟಿ ಪ್ರಮಾಣ ಇಳಿಕೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಮುಖವಾಗಿ ಮೈಸೂರು, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗದಲ್ಲಿ ಪಾಸಿಟಿವಿಟಿ ದರವೂ ಶೇ.30ರಷ್ಟಿತ್ತು. ಉಳಿದಂತೆ ಇತರೆ ಜಿಲ್ಲೆಗಳದ್ದು 10-20ರ ಅಸುಪಾಸಿನಲ್ಲಿತ್ತು. ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಾತ್ರ ಪಾಸಿಟಿವ್ ರೇಟು ಶೇ.5ರೊಳಗಿತ್ತು. ‌ಇದೀಗ ಕಳೆದೊಂದು ವಾರದ ಪಾಸಿಟಿವ್ ದರವೂ ಕುಸಿದಿದ್ದು ಕೊಂಚ ನೆಮ್ಮದಿ ತರುವಂತಾಗಿದೆ‌. ಭಾಗಶಃ ಜಿಲ್ಲೆಯಲ್ಲಿ ಶೇ.5ರಷ್ಟು ಇಳಿಕೆ‌ ಕಂಡಿದೆ.

ಜಿಲ್ಲೆಯ ಹೆಸರು ಪಾಸಿಟಿವಿಟಿ ದರ
ಮೈಸೂರು 2.55%
ಚಿಕ್ಕಮಗಳೂರು 5.46%
ದಾವಣಗೆರೆ 1.29%
ಚಿತ್ರದುರ್ಗ 1.45%
ಹಾಸನ 3.91%
ಉತ್ತರ ಕನ್ನಡ 1.57%
ದಕ್ಷಿಣ ಕನ್ನಡ 3.02%
ಚಾಮರಾಜನಗರ 3.09%
ಉಡುಪಿ 3.93%
ಕೋಲಾರ 2.35 %
ಬೆಂಗಳೂರು ಗ್ರಾಮಾಂತರ 2.06%
ಮಂಡ್ಯ 1.71%
ಕೊಪ್ಪಳ 0.96%
ಕೊಡಗು 5.56 %
ಬಳ್ಳಾರಿ 0.83%
ತುಮಕೂರು 2.18%
ಬೆಳಗಾವಿ 3.14%
ಚಿಕ್ಕಬಳ್ಳಾಪುರ 0.60%
ಶಿವಮೊಗ್ಗ 4.08%
ವಿಜಯಪುರ 0.17%
ಗದಗ 0.35%
ಧಾರವಾಡ 0.83%
ರಾಯಚೂರು 0.32%
ಬಾಗಲಕೋಟೆ 0.09%
ರಾಮನಗರ 1.13%
ಯಾದಗಿರಿ 0.32%
ಬೆಂಗಳೂರು ನಗರ 0.90%
ಹಾವೇರಿ 0.58%
ಕಲಬುರಗಿ 0.63%
ಬೀದರ್ 0.26%

ಕೊಡುಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.5ಕ್ಕಿಂತ ಹೆಚ್ಚಿದ್ದರೆ, ಉಳಿದಂತೆ ಬೇರೆ ಜಿಲ್ಲೆಯಲ್ಲಿ ಶೇ.4ಕ್ಕಿಂತ ಕಡಿಮೆ ಇದೆ. ಸದ್ಯ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕೋವಿಡ್ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ಇಳಿಕೆ ಆಗ್ತಿದೆ.

ಆದರೆ, ಜನ ಸಾಮಾನ್ಯರು ಕೋವಿಡ್ ನಿಯಮಗಳು, ಮಾರ್ಗಸೂಚಿಗಳನ್ನ ಪಾಲಿಸದೇ ಹೋದರೆ ಎರಡನೇ ಅಲೆಯಂತೆ ಮೂರನೇ ಅಲೆಯೂ ಹೆಚ್ಚು ಬಾಧಿಸಬಹುದು. ಹೀಗಾಗಿ, ಹೆಚ್ಚು ಎಚ್ಚರಿಕೆಯಿಂದ ಇರುವಂತೆ ತಜ್ಞರು ಸಲಹೆ ನೀಡಿದ್ದಾರೆ.

ABOUT THE AUTHOR

...view details