ಕರ್ನಾಟಕ

karnataka

ಇನ್ನೂ 2-3 ದಿನಗಳ ಕಾಲ ಮಾತ್ರ ಮುಷ್ಕರ, ಸರ್ಕಾರದ ಜತೆ ಸೌಹಾರ್ದಯುತ ಸಭೆ- ಕೋಡಿಹಳ್ಳಿ

By

Published : Apr 19, 2021, 5:37 PM IST

Updated : Apr 19, 2021, 5:52 PM IST

ಸರ್ಕಾರದ ಮುಂದೆ ಪ್ರಮುಖ ಮೂರು ಬೇಡಿಕೆಗಳನ್ನಿಟ್ಟಿದ್ದು, ಸಾರಿಗೆ ನೌಕರರನ್ನ ಸರ್ಕಾರಿ ನೌಕರರೆಂದು ನೇಮಕ ಮಾಡುವುದು. 2ನೇಯದಾಗಿ ವೇತನ ಪರಿಷ್ಕರಣೆ ಮಾಡಿರುವುದು. 3ನೇಯದಾಗಿ 2005ರಲ್ಲಿ ಶೇ.5ರಷ್ಟು ವೇತನ ಹೆಚ್ಚುವರಿ ಮಾಡುವುದರ ಕುರಿತಾಗಿ ಸ್ಪಷ್ಟನೆ ನೀಡುವ ಬಗ್ಗೆ ತಿಳಿಸಲಾಗಿದೆ..

cordial-meeting-after-cm-and-transport-minister-arrived
ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು :ರಾಜ್ಯಾದ್ಯಂತ ಸಾರಿಗೆ ನೌಕರರ ಸತ್ಯಾಗ್ರಹ 13ನೇ ದಿನವೂ ಮುಂದುವರೆದಿದೆ. ನಾಳೆ 14ನೇ ದಿನದ ಮುಷ್ಕರ ಯಥಾಸ್ಥಿತಿಯಲ್ಲಿ ನಡೆಯಲಿದೆ. ಸಿಎಂ ಹಾಗೂ ಸಾರಿಗೆ ಸಚಿವರು ಬಂದ ನಂತರ ಸೌಹಾರ್ದಯುತ ಸಭೆ ನಡೆಸಲಾಗುವುದು ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಇಂದು ಉಪವಾಸ ಸತ್ಯಾಗ್ರಹದ ವೇಳೆ ಪೊಲೀಸರು ಪ್ರಿವೆಂಟಿವ್ ಅರೆಸ್ಟ್ ಅನ್ನೋ ಕಾರಣ ಒಡ್ಡಿ ಸಾರಿಗೆ ನೌಕರರನ್ನ ಅರೆಸ್ಟ್ ಮಾಡಿ, ಬಳಿಕ ಅವರನ್ನ ಬಿಟ್ಟಿದ್ದಾರೆ. ಇತ್ತ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಚರ್ಚೆ ಮಾಡಿದ್ದು, ಸಿಎಂ ಹಾಗೂ ಸಾರಿಗೆ ಸಚಿವರು ಬಂದ ನಂತರ ಸೌಹಾರ್ದಯುತ ಸಭೆ ನಡೆಸಲಾಗುವುದು.

ಸರ್ಕಾರ ಮುಂದೆ ಪ್ರಮುಖ ಮೂರು ಬೇಡಿಕೆಗಳನ್ನ ಇಟ್ಟಿದ್ದು, ಸಾರಿಗೆ ನೌಕರರನ್ನ ಸರ್ಕಾರಿ ನೌಕರರೆಂದು ನೇಮಕ ಮಾಡುವುದು. ಎರಡನೇಯದಾಗಿ ವೇತನ ಪರಿಷ್ಕರಣೆ ಮಾಡುವುದು. ಮೂರನೇಯದಾಗಿ 2005ರಲ್ಲಿ ಶೇ.5ರಷ್ಟು ವೇತನ ಹೆಚ್ಚುವರಿ ಮಾಡುವುದರ ಕುರಿತಾಗಿ ಸ್ಪಷ್ಟನೆ ನೀಡುವ ಬಗ್ಗೆ ತಿಳಿಸಲಾಗಿದೆ.

ಸಿಎಂ-ಸಾರಿಗೆ ಸಚಿವರು ಬಂದ ನಂತರ ಸೌಹಾರ್ದಯುತ ಸಭೆ- ಕೋಡಿಹಳ್ಳಿ ಪ್ರತಿಕ್ರಿಯೆ..

ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ನೋಡಿಕೊಂಡು ಸಾರಿಗೆ ನೌಕರರು ಎಚ್ಚರಿಕೆ ವಹಿಸಬೇಕಿದೆ. ಇನ್ನೂ ಎರಡು ಮೂರು ದಿನಗಳ ಕಾಲ ಮಾತ್ರ ಮುಷ್ಕರ ನಡೆಯಲಿದೆ. ಮುಂದೆ ನಡೆಯುವ ಮುಷ್ಕರಗಳು ಶಾಂತಿಯುತವಾಗಿರುತ್ತವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಕುಮ್ಮಕ್ಕಿಗೆ ಒಳಗಾಗದೆ ಸರ್ಕಾರದ ಜತೆ ಕೈಜೋಡಿಸಿ :ಕೊರೊನಾ ಎರಡನೇ ಅಲೆಯ ತೀವ್ರತೆ ನಿಯಂತ್ರಿಸಿ ಸಾರ್ವಜನಿಕರನ್ನು ರಕ್ಷಿಸುವಲ್ಲಿ ಸರ್ಕಾರ ನಿರತವಾಗಿದೆ. ತಮ್ಮ ವಯೋಮಾನವನ್ನೂ ಲೆಕ್ಕಿಸದೆ ಜನರ ರಕ್ಷಣೆಗೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೂ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾರಿಗೆ ಸಚಿವ ಲಕ್ಷಣ ಸವದಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಷ್ಕರ ಮುಂದುವರಿಸುವುದು ಸೂಕ್ತವಲ್ಲ ಎಂದು ಬಿಎಂಟಿಸಿ ಉಪಾಧ್ಯಕ್ಷ ವೆಂಕಟೇಶ್ ಪ್ರಕಟಣೆ ಹೊರಡಿಸಿದ್ದಾರೆ.

ಕಳೆದ 13 ದಿನದ ಮುಷ್ಕರದ ಕಾರಣದಿಂದಾಗಿ ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿ ಸಾರಿಗೆ ಪ್ರಯಾಣಿಕರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆ ಮನಗಂಡು, ಸಾರ್ವಜನಿಕರ ಹಿತದೃಷ್ಟಿಯಿಂದ ದಯಮಾಡಿ ಕೂಡಲೇ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ. ಸದ್ಯದ ಪರಿಸ್ಥಿತಿ ತಿಳಿಯಾದ ಬಳಿಕ ಮುಖ್ಯಮಂತ್ರಿ ಹಾಗೂ ಸಚಿವರ ಬಳಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ಸರ್ಕಾರ ಹಾಗೂ ನೌಕರರ ನಡುವೆ ಹುಳಿ ಹಿಂಡುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ಮಾಡಬಾರದು. ಕೊರೊನಾ ಲಾಕ್‌ಡೌನ್‌ನಂತಹ ಪರಿಸ್ಥಿತಿಯಲ್ಲೂ ನೌಕರರಿಗೆ ಸಂಸ್ಥೆ ವೇತನ ನೀಡಿದೆ ಎಂಬುದನ್ನು ಮರೆಯುವಂತಿಲ್ಲ. ಪ್ರತಿಷ್ಠೆಗೆ, ಮತ್ತೊಬ್ಬರ ಕುಮ್ಮಕ್ಕಿಗೆ ಒಳಗಾಗದೆ ಸರ್ಕಾರದ ಜತೆ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.

ಮುಷ್ಕರ ನಿರತ ತರಬೇತಿ ಸಿಬ್ಬಂದಿ ವಜಾ :ಮುಷ್ಕರ ನಿರತ ತರಬೇತಿ ಸಿಬ್ಬಂದಿ ಮೇಲೆ ಕೆಎಸ್​ಆರ್​ಟಿಸಿ ಕ್ರಮಕ್ಕೆ ಮುಂದಾಗಿದೆ. 251 ತರಬೇತಿ ನೌಕರರನ್ನ ವಜಾ ಮಾಡಿದೆ. ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ರೂ ಸಿಬ್ಬಂದಿ ಬಾರದ ಹಿನ್ನಲೆ, ತರಬೇತಿ ನೌಕರರನ್ನ ವಜಾ ಮಾಡಿ ಕೆಎಸ್​ಆರ್​ಟಿಸಿ ಎಂ‌ಡಿ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ.

Last Updated : Apr 19, 2021, 5:52 PM IST

ABOUT THE AUTHOR

...view details