ಕರ್ನಾಟಕ

karnataka

ETV Bharat / city

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಾನುವಾರುಗಳ ಸಂರಕ್ಷಣೆಗೆ ಕಂಟ್ರೋಲ್ ರೂಂ - Flood in Karnataka

ಪ್ರವಾಹ ಪೀಡಿತ ಮತ್ತು ಮಳೆಹಾನಿ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಜಾನುವಾರುಗಳ ಸಂರಕ್ಷಣೆಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ವತಿಯಿಂದ ಪ್ರತ್ಯೇಕ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ.

helpline

By

Published : Aug 9, 2019, 3:23 AM IST

ಬೆಂಗಳೂರು:ಪ್ರವಾಹ ಪೀಡಿತ ಮತ್ತು ಮಳೆಹಾನಿ ಪ್ರದೇಶಗಳಲ್ಲಿ ಜಾನುವಾರಗಳ ಸಂರಕ್ಷಣೆಗೆ ಪ್ರತ್ಯೇಕ ಕಂಟ್ರೋಲ್ ರೂಂಗಳನ್ನು ರಾಜ್ಯ ಸರ್ಕಾರದಿಂದ ತೆರೆಯಲಾಗಿದೆ.

ಬೆಳಗಾವಿ, ಬಾಗಲಕೋಟೆ, ಉತ್ತರಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು, ಹಾಸನ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಧಾರವಾಡ ಹಾಗೂ ಹಾವೇರಿ ಸೇರಿದಂತೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಜಾನುವಾರುಗಳಗೆ ತೊಂದರೆ ಆಗುತ್ತಿದೆ. ಎಷ್ಟೋ ಜಾನುವಾರುಗಳು ನೀರು ಪಾಲಾಗಿವೆ.

ಹಾಗಾಗಿ ಸಂಕಷ್ಟದಲ್ಲಿರಿವ ಜಾನುವಾರುಗಳ ಕುರಿತು ಮಾಹಿತಿ ನೀಡಲು ಅನುಕೂಲವಾಗುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಕಂಟ್ರೋಲ್ ರೂಂ ಪ್ರಾರಂಭಿಸಲಾಗಿದೆ.ಜಾನುವಾರುಗಳ ನಿರ್ವಹಣೆ ಹಾಗೂ ನೆರವಿಗಾಗಿ ಕಂಟ್ರೋಲ್ ರೂಂ ಸಂಪರ್ಕಿಸಿದರೆ ಇಲಾಖೆಯಿಂದ ಸಹಾಯ ಮಾಡಲಾಗುವುದು ಎಂದು ಪಶು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಸಂಪರ್ಕ

ಕಂಟ್ರೋಲ್ ರೂಂ ನಂ-080- 23417100

ವ್ಯಾಟ್ಸ್ಆ್ಯಪ್​, ತುರ್ತು ಕರೆಗಾಗಿ - 8277894666

ABOUT THE AUTHOR

...view details