ಕರ್ನಾಟಕ

karnataka

ETV Bharat / city

ನಿಮ್ಹಾನ್ಸ್​​​​ನಲ್ಲಿ ಗುತ್ತಿಗೆ ಕಾರ್ಮಿಕರ ಚಿಕಿತ್ಸೆಗೆ ತಾರತಮ್ಯ ಆರೋಪ: ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ

ಕೊರೊನಾ ವೈರಸ್​ ಕಾಣಿಸಿಕೊಂಡರೆ ನಮಗೆ ಚಿಕಿತ್ಸೆ ನೀಡದೆ ಬೆಂಗಳೂರು ನಿಮ್ಹಾನ್ಸ್​​​​ ಆಸ್ಪತ್ರೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ಆಸ್ಪತ್ರೆ ಆವರಣದಲ್ಲಿ ಗುತ್ತಿಗೆ ಕಾರ್ಮಿಕರು ಇಂದು ಪ್ರತಿಭಟನೆ ನಡೆಸಿದರು.

Contract employees protest
ಗುತ್ತಿಗೆ ನೌಕರರ ಪ್ರತಿಭಟನೆ

By

Published : Jul 20, 2020, 3:32 PM IST

ಬೆಂಗಳೂರು:ಕೊರೊನಾ ವೈರಸ್​ ಕಾಣಿಸಿಕೊಂಡರೆ ನಮಗೆ ಚಿಕಿತ್ಸೆ ನೀಡದೆ ನಗರದ ನಿಮ್ಹಾನ್ಸ್​​​​ ಆಸ್ಪತ್ರೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ಆಸ್ಪತ್ರೆ ಆವರಣದಲ್ಲಿ ಗುತ್ತಿಗೆ ಕಾರ್ಮಿಕರು ಇಂದು ಪ್ರತಿಭಟನೆ ನಡೆಸಿದರು.

850 ಗುತ್ತಿಗೆ ಪೌರ ಕಾರ್ಮಿಕರ ಪೈಕಿ 18 ಜನಕ್ಕೆ ಕೋವಿಡ್ ಸೋಂಕು ಬಂದಿದೆ. ಆದರೆ, ಬೇರೆ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ನಿಮ್ಹಾನ್ಸ್​ನಲ್ಲಿರುವ 50 ಬೆಡ್ ಹಾಗೂ ಇನ್ನೊಂದು ಕಟ್ಟಡದ ಆಸ್ಪತ್ರೆಯನ್ನು ಕೇವಲ ಕಾಯಂ ನೌಕರರಿಗೆ ಮೀಸಲಿಡಲಾಗಿದೆ. ಪಿಪಿಇ ಕಿಟ್ ತೆಗೆದು ಸ್ನಾನ ಮಾಡಿ ಮನೆಗೆ ಹೋಗಿ ಎಂದು ವೈದ್ಯರು ಹೇಳುತ್ತಿದ್ದಾರೆ ಎಂದು ಕಾರ್ಮಿಕ ಶಿವಕುಮಾರ್ ಅಳಲು ತೋಡಿಕೊಂಡಿದ್ದಾರೆ.

ಗುತ್ತಿಗೆ ನೌಕರರ ಪ್ರತಿಭಟನೆ

ಪಾಸಿಟಿವ್ ಬಂದವರಿಗೆ ಕೋವಿಡ್ ಕೇರ್ ಸೆಂಟರ್ ಅಥವಾ ಸಾಂಸ್ಥಿಕ ಕ್ವಾರಂಟೈನ್ ಸೌಲಭ್ಯ ನೀಡದೆ, ಮನೆಗೆ ಕಳಿಸಲಾಗುತ್ತಿದೆ. ಇದರಿಂದ ಚಿಕ್ಕ ಮನೆಯಲ್ಲಿ ವಾಸವಾಗಿರುವ ಕಾರ್ಮಿಕರು, ತಮ್ಮ ಮನೆಯವರಿಗೂ ಸೋಂಕು ಹಬ್ಬಿಸಿದಂತಾಗುತ್ತದೆ. ಕಾಯಂ ನೌಕರರಿಗೆ ಎಲ್ಲಾ ಸೌಲಭ್ಯ ಕೊಟ್ಟು, ಗುತ್ತಿಗೆ ನೌಕರರಿಗೆ ನೀಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು.

ಸರಿಯಾದ ಚಿಕಿತ್ಸೆ, ಸುರಕ್ಷಾ ಕವಚಗಳು, ಪಿಪಿಇ ಕಿಟ್, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ₹ 50 ಲಕ್ಷ ವಿಮೆ, ಲಾಕ್​​​ಡೌನ್ ಸಮಯದ ವೇತನ ಹಾಗೂ ಕೋವಿಡ್ ಕರ್ತವ್ಯದ ತಿಂಗಳ ವಿಶೇಷ ವೇತನ ನೀಡಬೇಕು. ಆರಂಭದಲ್ಲಿ ಕ್ವಾರಂಟೈನ್ ಸೌಲಭ್ಯ ನೀಡುತ್ತೇವೆ ಎಂದ ನಿಮ್ಹಾನ್ಸ್ ಆಡಳಿತ ವರ್ಗ, ಈಗ ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾರ್ಮಿಕರು ಆತಂಕ ಹೊರಹಾಕಿದರು.

ABOUT THE AUTHOR

...view details