ಬೆಂಗಳೂರು:ಕೊರೊನಾ ನೆಪವೊಡ್ಡಿ ನೈರುತ್ಯ ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 125 ಗುತ್ತಿಗೆ ನೌಕರನನ್ನು ರೈಲ್ವೆ ಇಲಾಖೆ ಏಕಾಏಕಿ ಕೆಲಸದಿಂದ ಕಿತ್ತು ಹಾಕಿದೆ. ಹೀಗಾಗಿ, ಅವರ ಬದುಕು ಬೀದಿಗೆ ಬಂದಿದೆ.
ಕೊರೊನಾ ಸಂಕಷ್ಟ: ಏಕಾಏಕಿ 125 ಗುತ್ತಿಗೆ ಸಿಬ್ಬಂದಿಯನ್ನು ಹೊರ ದಬ್ಬಿದ ರೈಲ್ವೆ ಇಲಾಖೆ - ನೈರುತ್ಯ ರೈಲ್ವೆ ಇಲಾಖೆ
125 ಗುತ್ತಿಗೆ ನೌಕರರನ್ನು ಕೆಲಸದಿಂದ ವಜಾ ಮಾಡಿರುವ ರೈಲ್ವೆ ಇಲಾಖೆಯ ನಿರ್ಧಾರ ಖಂಡಿಸಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸಿಬ್ಬಂದಿ ಧರಣಿ ಆರಂಭಿಸಿದ್ದಾರೆ.
ಗುತ್ತಿಗೆ ನೌಕರರ ಪ್ರತಿಭಟನೆ
ಕೆಲಸದಿಂದ ವಜಾ ಮಾಡಿರುವ ರೈಲ್ವೆ ಇಲಾಖೆಯ ನಿರ್ಧಾರ ಖಂಡಿಸಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸಿಬ್ಬಂದಿ ಧರಣಿ ಆರಂಭಿಸಿದ್ದಾರೆ. ಇಲಾಖೆ ನಿರ್ಧಾರಕ್ಕೆ ಸಿಡಿದೆದ್ದ ನೌಕರರು ಕಾರಣ ನೀಡದೆ ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ನೋಟಿಸ್ ನೀಡದೆ ವಜಾ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.