ಬೆಂಗಳೂರು : ಕಳೆದ 10 ವರ್ಷಗಳಿಂದ ನಿರಂತರವಾಗಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಬೆಂಗಳೂರು ನಗರ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಂಟು ಮಂದಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆ ಲೈಂಗಿಕ ದೌರ್ಜನ್ಯ, ಆತ್ಯಾಚಾರ ಹಾಗೂ ಫೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಯುವತಿಗೆ 6 ವರ್ಷವಾಗಿದ್ದಾಗ ತಂದೆ ಪಾದ್ರಿಯಾಗಿ ಕೆಲಸ ಮಾಡುತ್ತಿದ್ದು ಕೆಲಸ ನಿಮಿತ್ತ ಸ್ನೇಹಿತರೊಬ್ಬರ ಮನೆಗೆ ಬಿಟ್ಟಿದ್ದರು. 10 ವರ್ಷವಾದಾಗ ಈ ವೇಳೆ ಸ್ನೇಹಿತನ ಮಗ ಬಾಲಕಿಗೆ ಮೊಬೈಲ್ನಲ್ಲಿ ಅಸಭ್ಯ ಚಿತ್ರ ಹಾಗೂ ವಿಡಿಯೋ ನೋಡುವಂತೆ ಬಲವಂತ ಮಾಡಿ ದೌರ್ಜನ್ಯ ಎಸಗುತ್ತಿದ್ದ. ಮೂರು-ನಾಲ್ಕು ವರ್ಷದವರೆಗೂ ಲೈಂಗಿಕವಾಗಿ ತನನ್ನ ಬಳಸಿಕೊಂಡಿದ್ದ. ಬಳಿಕ ಯುವಕನ ಕಾಟ ತಾಳಲಾರದೇ ಶಾಲಾ ಶಿಕ್ಷಕನಿಗೆ ತಿಳಿಸಿದ್ದೆ.