ಬೆಂಗಳೂರು: ಕಣ್ವ ಸಮೂಹ ಸಂಸ್ಥೆಯಿಂದ ಜನರಿಗೆ ಮೋಸವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಅಧ್ಯಕ್ಷ ಹರೀಶ್ ಸ್ಪಷ್ಟನೆ ನೀಡಿದ್ದಾರೆ.
ಕಣ್ವ ಬ್ಯಾಂಕ್ ವಿರುದ್ಧ ಗ್ರಾಹಕರ ಆರೋಪ: ಬ್ಯಾಂಕ್ ಅಧ್ಯಕ್ಷರಿಂದ ಸ್ಪಷ್ಟನೆ - Kanva co operative bank allegation
ಕಣ್ವ ಸಮೂಹ ಸಂಸ್ಥೆಯಿಂದ ಜನರಿಗೆ ವಂಚನೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಅಧ್ಯಕ್ಷ ಹರೀಶ್ ಸ್ಪಷ್ಟನೆ ನೀಡಿದ್ದಾರೆ.
ಕಣ್ವ ಸಂಸ್ಥೆಯ ವಿರುದ್ಧ ನಿವೇಶನ ವಿಚಾರ ಹಾಗೂ ಗ್ರಾಹಕರ ಹಣವನ್ನು ವಾಪಸ್ ಕೊಟ್ಟಿಲ್ಲವೆಂಬ ಆರೋಪ ಕೇಳಿ ಬಂದಿದೆ. ಆದರೆ ಕಳೆದ 31 ತಿಂಗಳ ಅವಧಿಯಲ್ಲಿ 297 ಕೋಟಿ ರೂ ಹಣವನ್ನು ವಾಪಾಸ್ ನೀಡಿದ್ದೇವೆ. ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ನಲ್ಲಿ ಗ್ರಾಹಕರು 600 ಕೋಟಿ ರೂ ಹಣ ಡೆಪಾಸಿಟ್ ಮಾಡಿದ್ರು. 700 ಕೋಟಿ ರೂ ಹಣವನ್ನು ಸಾಲವಾಗಿ ಕೊಟ್ಟಿದ್ದೇವೆ. ಕಳೆದ ಮೂರು ವರ್ಷಗಳಿಂದ ಆರ್ಥಿಕತೆ ಕುಂಟುತ್ತಾ ಸಾಗುತ್ತಿದೆ. ನಾವು ನಿಧಾನವಾಗಿ ಡೆಪಾಸಿಟ್ ಹಣವನ್ನು ಗ್ರಾಹಕರಿಗೆ ನೀಡುತ್ತಾ ಇದ್ದೀವಿ ಎಂದು ಬ್ಯಾಂಕ್ ಅಧ್ಯಕ್ಷ ಹರೀಶ್ ಹೇಳಿದ್ರು.
ಕಣ್ವ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ನಂಜುಡೇಗೌಡರನ್ನು ಪಶ್ಚಿಮ ವಿಭಾಗ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.