ಬೆಂಗಳೂರು:ಬಹಳ ದಿನಗಳಿಂದಲೂ ನಿವೇಶನ ಕೊರತೆಯಿಂದ ನನೆಗುದಿಗೆ ಬಿದ್ದಿದ್ದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ ನಿರ್ಮಾಣಕ್ಕೆ ಕೊನೆಗೂ ಜಾಗ ಸಿಕ್ಕಿದೆ.
ರಾಣಿ ಚೆನ್ನಮ್ಮ ವಸತಿ ನಿಲಯ ನಿರ್ಮಾಣಕ್ಕೆ ಜಾಗ ಬಿಟ್ಟುಕೊಟ್ಟ ಗ್ರಾಮ ಪಂಚಾಯಿತಿ - Land issue
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗುವಂತೆ ವಸತಿ ನಿಲಯ ನಿರ್ಮಿಸಲು ಸರ್ಕಾರ ಮುಂದಾಗಿದೆ.
ಜಿಲ್ಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗಲು ವಸತಿ ನಿಲಯ ನಿರ್ಮಿಸಲು ಸರ್ಕಾರ ಮುಂದಾಗಿತ್ತು. ಅಲ್ಲದೇ ಸಮಾಜ ಕಲ್ಯಾಣ ಇಲಾಖೆಯಿಂದ ₹18 ಕೋಟಿ ಅನುದಾನ ಮಂಜೂರಾಗಿತ್ತು. ಆದರೆ, ಅದಕ್ಕೆ ನಿವೇಶನದ ಕೊರತೆ ಎದುರಾಗಿತ್ತು. ಆರಂಭದಲ್ಲಿ ಚನ್ನರಾಯಪಟ್ಟಣ ಹೋಬಳಿಯ ಸೋಮತ್ತನಹಳ್ಳಿಯಲ್ಲಿ ಜಾಗ ಮಂಜೂರಾಗಿತ್ತು. ಜಾಗದ ವಿಸ್ತೀರ್ಣ ಕಡಿಮೆಯಿದ್ದ ಕಾರಣ ಬೇರೆ ಸ್ಥಳಕ್ಕಾಗಿ ಸರ್ಕಾರ ಹುಡುಕಾಟ ನಡೆಸಿತ್ತು.
ನಲ್ಲೂರು ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯ ಬಾಲೇಪುರ ಗ್ರಾಮದ ಸರ್ವೇ ನಂಬರ್ 60ರಲ್ಲಿ 8 ಎಕರೆ ಭೂಮಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿ ನಿವೇಶನ ಸಮಸ್ಯೆ ನೀಗಿಸಿದೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದ್ದು, ಈ ವಸತಿ ಶಾಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 75 ಹಾಗೂ ಸಾಮಾನ್ಯ ಜನರಿಗೆ 25 ರಷ್ಟು ಅವಕಾಶ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.