ಬೆಂಗಳೂರು:ಎಟಿಎಂಗೆ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಹಣ ದೋಚಲು ಸಂಚು ರೂಪಿಸಿದ್ದ ಆರೋಪದ ಮೇರೆಗೆ ಸ್ಥಳಿಯರೇ ವಿದೇಶಿ ಪ್ರಜೆಯನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ಉಪ್ಪಾರಪೇಟೆ ಬಳಿ ನಡೆದಿದೆ.
ಎಟಿಎಂನಲ್ಲಿ ಹಣ ದೋಚಲು ಸಂಚು: ವಿದೇಶಿ ಪ್ರಜೆಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು - The natives who surrendered the foreigners to the police
ಬೆಂಗಳೂರಿನ ಉಪ್ಪಾರಪೇಟೆಯ ಐಡಿಬಿಐ ಬ್ಯಾಂಕ್ನ ಎಟಿಎಂನಲ್ಲಿ ಸ್ಕಿಮ್ಮಿಂಗ್ ಯಂತ್ರ ಬಳಸಿ ಹಣ ದೋಚುತ್ತಿರುವ ಆರೋಪದಡಿ ಸ್ಥಳಿಯರೇ ವಿದೇಶಿ ಪ್ರಜೆಯನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಕೊಲಂಬಿಯಾ ದೇಶದ ಕ್ರಿಸ್ಟಿನೊ ನವೊರ ಎಂಬ ವಿದೇಶಿ ಪ್ರಜೆಯನ್ನು ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಲ್ಲಿನ ಐಡಿಬಿಐ ಬ್ಯಾಂಕ್ನ ಎಟಿಎಂ ಮುಂದೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈತನ ವರ್ತನೆ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಈತನನ್ನು ಬಂಧಿಸಿ ಪರಿಶೀಲಿಸಿದ ವೇಳೆ ಪೊಲೀಸರಿಗೆ ಸ್ಕಿಮ್ಮಿಂಗ್ ಯಂತ್ರ ಪತ್ತೆಯಾಗಿದೆ.
ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿರುವ ಉಪ್ಪಾರಪೇಟೆ ಪೊಲೀಸರು, ಶಿವಾಜಿನಗರ ಹಾಗೂ ನಗರದ ಉತ್ತರ ವಿಭಾಗದ ವ್ಯಾಪ್ತಿಯಲ್ಲಿ ಸ್ಕಿಮ್ಮಿಂಗ್ ಯಂತ್ರದಿಂದ ಹಣ ದೋಚಿರುವ ಶಂಕೆ ವ್ಯಕ್ತಪಡಿಸಿದ್ದಾರೆ.