ಕರ್ನಾಟಕ

karnataka

ETV Bharat / city

ಪಿಎಸ್‌ಐ ನೇಮಕಾತಿ ಅಕ್ರಮ ತನಿಖೆ ಹಗ್ಗ ಕಾಂಗ್ರೆಸ್ ಕುತ್ತಿಗೆಗೆ ಸುತ್ತಿಕೊಳ್ಳಲಿದೆ: ಕಟೀಲ್ - ಪಿಎಸ್​ಐ ಹಗರಣ

ಮುಂದಿನ ಮುಖ್ಯಮಂತ್ರಿ ನಾನೇ ಅಂತ ಘೋಷಣೆ ಮಾಡಬೇಕೆಂಬ ಒತ್ತಡ ಹೇರಲು ಸಿದ್ದರಾಮೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ಕಟೀಲ್ ದೂರಿದರು.

ಕಟೀಲ್
ಕಟೀಲ್

By

Published : Jul 7, 2022, 3:41 PM IST

ಬೆಂಗಳೂರು:ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆಯ ಹಗ್ಗ ಕಾಂಗ್ರೆಸ್ ಕುತ್ತಿಗೆಯನ್ನೇ ಸುತ್ತಿಕೊಳ್ಳುತ್ತದೆ. ಇದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿ, ಪಿಎಸ್‌ಐ ಹಗರಣದ ತನಿಖೆ ಪೂರ್ತಿಯಾದಾಗ ಕಾಂಗ್ರೆಸ್​​ನ ಯಾರ್ಯಾರು ಅಕ್ರಮದಲ್ಲಿ ಇದಾರೆ ಅಂತ ಗೊತ್ತಾಗುತ್ತದೆ. ಆ ನಂತರ ಎಲ್ಲ ಹಗರಣಗಳೂ ಹೊರಗೆ ಬರುತ್ತವೆ ಎಂದು ಕಾಂಗ್ರೆಸ್ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟಾಂಗ್ ನೀಡಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸುವ ನೈತಿಕ ಹಕ್ಕು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಇಲ್ಲ. ಹಾಗೆ ನೋಡಿದರೆ ಸಿದ್ದರಾಮಯ್ಯ ಅಧಿಕಾರಕ್ಕೆ ಏರಿದ ಮರುದಿನವೇ ರಾಜೀನಾಮೆ ಕೊಡಬೇಕಿತ್ತು.

ನಮ್ಮ ಸಿಎಂ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ: ಅವರ ಕಾಲಘಟ್ಟದಲ್ಲಿ ಹಗರಣಗಳ ರಾಶಿಯೇ ಬಿದ್ದಿತ್ತು, ಐಎಎಸ್ ಅಧಿಕಾರಿ ಡಿಕೆ ರವಿ, ಡಿವೈಎಸ್ಪಿ ಗಣಪತಿಯಂಥ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡರು. ಮೂರ್ನಾಲ್ಕು ಡಿವೈಎಸ್ಪಿಗಳು ರಾಜೀನಾಮೆ ಕೊಟ್ಟರು, ಅರ್ಕಾವತಿ ಹಗರಣ ಆಯಿತು, ಸಿದ್ದರಾಮಯ್ಯ ಸಾಮರ್ಥ್ಯವೇ ಇಲ್ಲದ ಸಿಎಂ ಆಗಿದ್ದರು. ಒಬ್ಬ ಸಚಿವರ ಮೇಲೂ ಅವರು ಕ್ರಮ ಕೈಗೊಳ್ಳಲಿಲ್ಲ, ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲಿಲ್ಲ ಹಾಗಾಗಿ ನಮ್ಮ ಸಿಎಂ ಬಗ್ಗೆ ಮಾತಾಡಲು ಸಿದ್ದರಾಮಯ್ಯಗೆ ನೈತಿಕ ಹಕ್ಕಿಲ್ಲ ಎಂದು ತಿರುಗೇಟು ನೀಡಿದರು.

ಡ್ರಗ್ಸ್​ ಮಾಫಿಯಾದಿಂದಲೇ ಕಾಂಗ್ರೆಸ್​ ಸರ್ಕಾರ ಉಳಿದುಕೊಂಡಿತ್ತು:ನಮ್ಮ ಸರ್ಕಾರ ಡ್ರಗ್ಸ್ ಮಾಫಿಯಾ ಕಂಟ್ರೋಲ್ ಮಾಡಿದೆ. ಡ್ರಗ್ಸ್ ಮಾಫಿಯಾದ ನೆರಳಿನಲ್ಲೇ ಕಾಂಗ್ರೆಸ್ ಸರ್ಕಾರ ಬದುಕಿತ್ತು. ಡ್ರಗ್ಸ್ ಮಾಫಿಯಾದ ದಂಧೆಯಿಂದಲೇ ಕಾಂಗ್ರೆಸ್ ಸರ್ಕಾರ ಉಳಿದುಕೊಂಡಿತ್ತು, ಇಂತಹ ಡ್ರಗ್ಸ್ ದಂಧೆ ಇಂದು ಕಂಟ್ರೋಲ್ ಆಗಿದೆ. ಇವತ್ತು ಪಿಎಸ್‌ಐ ಕೇಸ್​ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯನ್ನೇ ಜೈಲಿಗೆ ಹಾಕುವ ಧೈರ್ಯ ಸಿಎಂ ಬೊಮ್ಮಾಯಿ ತೋರಿಸಿದ್ದಾರೆ. ನಮ್ಮ ಸರ್ಕಾರ ಭ್ರಷ್ಟಾಚಾರ ಸಹಿಸಲ್ಲ ಎನ್ನುವುದಕ್ಕೆ ಇದೇ ನಿದರ್ಶನ, ಪಿಎಸ್‌ಐ ಹಗರಣದ ತನಿಖೆ ಪೂರ್ತಿಯಾದಾಗ ಕಾಂಗ್ರೆಸ್​​ನ ಯಾರ್ಯಾರು ಅಕ್ರಮದಲ್ಲಿ ಇದಾರೆ ಅಂತ ಗೊತ್ತಾಗುತ್ತದೆ ಆ ನಂತರ ಎಲ್ಲ ಹಗರಣಗಳೂ ಹೊರಗೆ ಬರುತ್ತವೆ ಎಂದರು.

(ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಶಿಂದೆ ಸಚಿವ ಸಂಪುಟದಲ್ಲಿ 25 ಬಿಜೆಪಿ, 13 ಶಿವಸೇನೆ ಸಚಿವರು!?)

ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮೋತ್ಸವ: ಕಾಂಗ್ರೆಸ್​​ನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು, ಹೈಕಮಾಂಡ್​​ಗೆ ತಮ್ಮ ಶಕ್ತಿ ತೋರಿಸಬೇಕು, ಮುಂದಿನ ಮುಖ್ಯಮಂತ್ರಿ ನಾನೇ ಅಂತ ಘೋಷಣೆ ಮಾಡಬೇಕೆಂಬ ಒತ್ತಡವನ್ನು ಸಿದ್ದರಾಮಯ್ಯ ಸೃಷ್ಟಿಸುತ್ತಿದ್ದಾರೆ ಅದಕ್ಕಾಗಿಯೇ ಸಿದ್ದರಾಮೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಕಟೀಲ್ ಟಾಂಗ್ ನೀಡಿದರು.

ಡಿಕೆ ಶಿವಕುಮಾರ್ ಅವರನ್ನು ಮುಗಿಸೋದು ಸಿದ್ದರಾಮಯ್ಯ ತಂತ್ರ, ಈಗಾಗಲೇ ಜನತಾದಳವನ್ನು ಸಿದ್ದರಾಮಯ್ಯ ಮುಗಿಸಿದರು. ಕಾಂಗ್ರೆಸ್​ಗೆ ಬಂದು ನಿಜವಾದ ಕಾಂಗ್ರೆಸಿಗರನ್ನು ಹೊರಗಿಟ್ಟರು, ದಲಿತ ಸಿಎಂ ಆಗಬೇಕಾಗಿದ್ದ ಖರ್ಗೆಯವರನ್ನು ಹೊರಗಿಟ್ಟರು, ಡಾ.ಜಿ ಪರಮೇಶ್ವರ್ ಅವರನ್ನು ಸೋಲಿಸಿದರು, ಈಗ ಡಿಕೆಶಿ ಮುಗಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ. ಸಿದ್ದರಾಮೋತ್ಸವದಿಂದ ನಮಗೇನೂ ಭಯ ಇಲ್ಲ ಡಿಕೆಶಿ ಅವರಿಗೆ ಭಯ ಇದೆ ಡಿಕೆಶಿ ನಿದ್ದೆ ಕೆಡಿಸುತ್ತಿದ್ದಾರೆ ಎಂದರು.

ಸಿದ್ದರಾಮೋತ್ಸವ ಮಾಡುತ್ತಿರೋದು ನಮಗೆ ಖುಷಿಯಾಗಿದೆ. ಸಿದ್ದರಾಮಣ್ಣ ಇನ್ನೊಂದು ನಾಲೈದು ಲಕ್ಷ ಜನ ಸೇರಿಸಲಿ ಬೇಕಾದರೆ ಇದಕ್ಕೆ ನಾವೂ ಸಹ ಸಹಕಾರ ಕೊಡುತ್ತೇವೆ, ಸಿದ್ದರಾಮೋತ್ಸವದಿಂದ ನಮಗೇನೂ ಹೊಟ್ಟೆಕಿಚ್ಚಾಗಿಲ್ಲ ಆದರೆ ಡಿಕೆಶಿ ಅವರು ಮಲಗುತ್ತಿಲ್ಲ. ಸಿದ್ದರಾಮೋತ್ಸವ ಬಿಜೆಪಿ ವಿರುದ್ಧ ಮಾಡುತ್ತಿಲ್ಲ, ಅದನ್ನು ಮಾಡುತ್ತಿರೋದು ಡಿಕೆಶಿಯ ವಿರುದ್ಧ ಎಂದು ದೂರಿದರು.

ABOUT THE AUTHOR

...view details