ಕರ್ನಾಟಕ

karnataka

ETV Bharat / city

ರಾಜಭವನ ಮುತ್ತಿಗೆಗೆ ಅವಕಾಶ ಅನುಮಾನ: ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಗೆ ಕಾಂಗ್ರೆಸ್ ತೀರ್ಮಾನ - ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ

ರಾಜಭವನ ಮುತ್ತಿಗೆಗೆ ಅವಕಾಶ ಅನುಮಾನ ಹಿನ್ನೆಲೆಯಲ್ಲಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಗೆ ನಡೆಸಲು ಕಾಂಗ್ರೆಸ್ ನಾಯಕರು ತೀರ್ಮಾನ ಮಾಡಿದ್ದಾರೆ.

Congress rajbhavana chalo
ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಗೆ ಕಾಂಗ್ರೆಸ್ ತೀರ್ಮಾನ

By

Published : Jul 22, 2021, 11:30 AM IST

ಬೆಂಗಳೂರು:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರ ರಾಜಭವನ ಮುತ್ತಿಗೆಗೆ ವಿಧಾನಸೌಧದ ಬಳಿ ಚಾಲನೆ ಸಿಕ್ಕಿದೆ.

ಇಂದು ಬೆಳಗ್ಗೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ವಿಧಾನಸೌಧದ ಶಾಸಕಾಂಗ ಪಕ್ಷದ ಕಚೇರಿಗೆ ಆಗಮಿಸಿ, ಪಕ್ಷದ ವಿವಿಧ ಹಿರಿಯ ನಾಯಕರ ಜೊತೆ ಚರ್ಚಿಸಿದ ಬಳಿಕ, ಹಲವು ಶಾಸಕರ ಜೊತೆ ರಾಜಭವನದತ್ತ ಮೆರವಣಿಗೆ ಹೊರಟರು. ಮೆರವಣಿಗೆಯಲ್ಲಿ ಸಿದ್ದರಾಮಯ್ಯಗೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್​.ಆರ್​.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೆಪಿಸಿಸಿಯ ವಿವಿಧ ಕಾರ್ಯಾಧ್ಯಕ್ಷರು, ಮಾಜಿ ಸಚಿವರು ಶಾಸಕರು ಸಾಥ್ ನೀಡಿದರು.

ಬೆಳಗ್ಗೆ ವಿಧಾನಸೌಧ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಕಾಂಗ್ರೆಸ್ ನಾಯಕರು ರಾಜಭವನದತ್ತ ಹೊರಟಿದ್ದಾರೆ. ಕೋವಿಡ್ ನಿಯಮಾವಳಿಗಳ ಹಿನ್ನೆಲೆ ಮೆರವಣಿಗೆಗೆ ಅವಕಾಶ ಇಲ್ಲ. ಅಲ್ಲದೇ, ರಾಜಭವನ ಮುತ್ತಿಗೆಗೆ ಪೊಲೀಸರು ತಡೆ ಒಡ್ಡಲಿದ್ದಾರೆ. ವಿಧಾನಸೌಧ ಆವರಣದಲ್ಲಿ ಪೊಲೀಸರು ಕಾಂಗ್ರೆಸ್ ಮುಖಂಡರನ್ನು ತಡೆಯುವ ಸಾಧ್ಯತೆ ಇದೆ.

ಗಾಂಧಿ ಪ್ರತಿಮೆ ಮುಂಭಾಗ ಭಾಷಣ
ಕಾಂಗ್ರೆಸ್ ಮುಖಂಡರಿಗೆ ಮೆರವಣಿಗೆ ತೆರಳಲು ಪರವಾನಗಿ ಸಿಗುವುದು ಅನುಮಾನ ಇರುವ ಹಿನ್ನೆಲೆ, ಎಲ್ಲ ಮುಖಂಡರು ಮೊದಲು ಗಾಂಧಿ ಪ್ರತಿಮೆ ಬಳಿ ತೆರಳಿ ಅಲ್ಲಿ ಸಮಾವೇಶಗೊಂಡು ಕೇಂದ್ರ ಸರ್ಕಾರ, ಕಾಂಗ್ರೆಸ್ ನಾಯಕರು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಹಾಗೂ ಹಲವು ಪಕ್ಷದ ಮುಖಂಡರ ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರ ಸೂಕ್ತ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಲು ನಿರ್ಧರಿಸಿದ್ದಾರೆ.

ದೂರವಾಣಿ ಕದ್ದಾಲಿಕೆ ಜೊತೆ ಇನ್ನಿತರ ಹಲವು ವಿಚಾರಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆಯಷ್ಟೇ ದಿಲ್ಲಿಯಿಂದ ಆಗಮಿಸಿರುವ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ಗೆ ರಾಷ್ಟ್ರೀಯ ನಾಯಕರು, ಕೇಂದ್ರ ಸರ್ಕಾರದ ವಿರುದ್ಧ ಹೋರಾಟಗಳನ್ನು ಕೈಗೊಳ್ಳಿ ಎಂದಿದ್ದಾರೆ. ಇದರ ಭಾಗವಾಗಿಯೇ ಇಂದು ಬೃಹತ್ ಹೋರಾಟ ನಡೆಯುತ್ತಿದೆ.

ರಾಜಭವನ ಮುತ್ತಿಗೆ ಪೊಲೀಸರು ಅವಕಾಶ ನೀಡುವ ಸಾಧ್ಯತೆ ಕಡಿಮೆ ಇರುವ ಹಿನ್ನೆಲೆ ಕಾಂಗ್ರೆಸ್ ನಾಯಕರ ಹೋರಾಟ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಮುಂಭಾಗ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ:ಹಿಂದೆ ಮಾಡಿದ್ದ ತಪ್ಪಿನ ಅರಿವಾಗಿದೆ, ಸಿಡಿ‌ ಷಡ್ಯಂತ್ರಕ್ಕೆ ಸಿಲುಕೋ ವ್ಯಕ್ತಿ ನಾನಲ್ಲ: ರೇಣುಕಾಚಾರ್ಯ

ABOUT THE AUTHOR

...view details