ಬೆಂಗಳೂರು :ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಭಾರತೀಯ ಮಾನವಸಹಿತ ಗಗನಯಾನ ಯೋಜನೆಯನ್ನು ಕರ್ನಾಟಕದಿಂದ ಗುಜರಾತ್ಗೆ ಸ್ಥಳಾಂತರ ಮಾಡುವ ಪ್ರಸ್ತಾವನೆಯ ವಿರುದ್ಧ ಕಾಂಗ್ರೆಸ್ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿತು.
ನ್ಯೂ ಬಿಇಎಲ್ ರಸ್ತೆಯ ಇಸ್ರೋ ಸಂಸ್ಥೆಯ ಎದುರು ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸಚಿವ ಕೃಷ್ಣಬೈರೇಗೌಡ, ಎನ್ಎಸ್ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ಮುಖಂಡರಾದ ಹನುಮಂತೇಗೌಡ, ಜಯಸಿಂಹ ಮತ್ತಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇಸ್ರೋದ ಮಾನವ ಸಹಿತ ಗಗನಯಾನ ಯೋಜನೆಯನ್ನು ರಾಜ್ಯದಿಂದ ಗುಜರಾತ್ಗೆ ಸ್ಥಳಾಂತರಿಸುತ್ತಿರುವ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ. ಬಿಜೆಪಿಯ 25 ಜನ ಸಂಸದರು ಇದ್ದಾರೆ. ಪ್ರಧಾನಮಂತ್ರಿ ಬಳಿ ಮಾತನಾಡಿ, ಯೋಜನೆ ರಾಜ್ಯದಲ್ಲೇ ನಡೆಯಲು ಅನುಮತಿ ಕೇಳಬೇಕು ಎಂದು ಹೇಳಿದರು.
ಇದನ್ನೂ ಓದಿ: ಬ್ಯಾಂಕ್ ಗ್ರಾಹಕರ ಗಮನಕ್ಕೆ : ಡಿಸೆಂಬರ್ನಲ್ಲಿ 12 ದಿನ ಬ್ಯಾಂಕ್ ಬಂದ್
ಯೋಜನೆ ಸ್ಥಳಾಂತರದಿಂದ ರಾಜ್ಯದ ಗೌರವ ಹೋಗುವ ಕೆಲಸ ಆಗುವುದು ಬೇಡ. ಇದು ನಮ್ಮ ಮಕ್ಕಳ ಭವಿಷ್ಯ. ಇಸ್ರೋದಲ್ಲಿ 25 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ.