ಕರ್ನಾಟಕ

karnataka

ETV Bharat / city

ರಾವಣನ ರಾಜ್ಯದಲ್ಲಿ ಪೆಟ್ರೋಲ್‌ಗೆ 59 ರೂ., ರಾಮನ ರಾಜ್ಯದಲ್ಲಿ 100, ನಾಚಿಕೆ ಆಗಲ್ವಾ?: ಸಿದ್ದರಾಮಯ್ಯ - KPCC President DK Shivakumar

ಇಂತಹ ಕೆಟ್ಟ ಸರ್ಕಾರವನ್ನು ನಾನು ಇತಿಹಾಸದಲ್ಲಿ ನೋಡಿಲ್ಲ. ವರ್ಸ್ಟ್ ಚೀಫ್ ಮಿನಿಸ್ಟರ್, ವರ್ಸ್ಟ್ ಪ್ರೈಮಿನಿಸ್ಟರ್. ಐದು ರಾಜ್ಯದ ಚುನಾವಣೆ ಫಲಿತಾಂಶ ಬಂದ ನಂತರ 19 ಸಾರಿ ಇಂಧನ ಬೆಲೆ ಹೆಚ್ಚಿಸಲಾಗಿದೆ. ಇದನ್ನು ಸರ್ಕಾರ ಅನ್ನಲು ಸಾಧ್ಯವಾ? ಜನರು ತೆರಿಗೆ ಇಳಿಸುವಂತೆ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಒತ್ತಡ ತರಬೇಕು- ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

Bangalore
ಪೆಟ್ರೋಲ್​ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

By

Published : Jun 11, 2021, 12:08 PM IST

Updated : Jun 11, 2021, 12:35 PM IST

ಬೆಂಗಳೂರು:100 ನಾಟ್ಔಟ್(ತೈಲ ದರ) ಘೋಷಣೆ ಅಡಿ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಐದು ದಿನ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪಕ್ಷ ಕರೆ ಕೊಟ್ಟಿದೆ. ಅದರಂತೆ ನಗರದ ಶಿವಾನಂದ ಸರ್ಕಲ್​ನ ರೆಡ್ಡಿ ಪೆಟ್ರೋಲ್ ಬಂಕ್ ಎದುರು ಸೇರಿದ ಕೈ ನಾಯಕರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರತಿಭಟನೆ ಮಾಡಿ, ಜನರ ಗಮನ ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ. ಕೇಂದ್ರದಲ್ಲಿ ಡಾ.ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ 1 ರೂ. ಬೆಲೆ ಹೆಚ್ಚಿಸಿದಾಗಲೂ ಪ್ರತಿಪಕ್ಷ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಿತ್ತು. ಮೋದಿ ಸರ್ಕಾರ ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂತು ಎಂದರು.

ಪೆಟ್ರೋಲ್​ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಇಂತಹ ಕೆಟ್ಟ ಸರ್ಕಾರವನ್ನು ನಾನು ಇತಿಹಾಸದಲ್ಲಿ ನೋಡಿಲ್ಲ. ವರ್ಸ್ಟ್ ಚೀಫ್ ಮಿನಿಸ್ಟರ್, ವರ್ಸ್ಟ್ ಪ್ರೈಮಿನಿಸ್ಟರ್. ಐದು ರಾಜ್ಯದ ಚುನಾವಣೆ ಫಲಿತಾಂಶ ಬಂದ ನಂತರ 19 ಸಾರಿ ಇಂಧನ ಬೆಲೆ ಹೆಚ್ಚಿಸಲಾಗಿದೆ. ಇದನ್ನು ಸರ್ಕಾರ ಅನ್ನಲು ಸಾಧ್ಯವಾ? ಜನರು ತೆರಿಗೆ ಇಳಿಸುವಂತೆ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಒತ್ತಡ ತರಬೇಕು. ಪಾಕಿಸ್ತಾನದಲ್ಲಿ 59, ಶ್ರೀಲಂಕಾ 59 ರೂ. ಇದೆ. ರಾವಣದ ರಾಜ್ಯದಲ್ಲಿ 59 ರೂ. ಇದ್ದರೆ ರಾಮನ ರಾಜ್ಯದಲ್ಲಿ 100 ರೂ. ಇದೆ. ನಾಚಿಕೆ ಆಗಲ್ವಾ? ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಫೆಬ್ರವರಿಯಿಂದ ಈವರೆಗೆ ಸತತವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಿದೆ. ಇದು ಪಿಕ್ ಪಾಕೆಟ್ ಸರ್ಕಾರ. ಕೇಂದ್ರಕ್ಕೆ ಈ ಹಿಂದೆ ತೈಲ ಬೆಲೆ ಏಷ್ಟಿತ್ತು? ಈಗ ಎಷ್ಟಿದೆ ಎಂಬ ವಿವರ ನೀಡಿದ್ದೇವೆ. ಅದನ್ನು ಪರಿಶೀಲಿಸಿ ತೈಲ ಬೆಲೆ ಇಳಿಸಬೇಕು ಎಂದರು.

ಇದನ್ನೂ ಓದಿ:ಕೋವಿಡ್ ಲಸಿಕೆ ಪಡೆಯದ ವ್ಯಕ್ತಿ, ಮಕ್ಕಳ ದೇಹದಲ್ಲೂ ಉರಿಯುತ್ತಿದೆ ಬಲ್ಬ್ : ವಿಡಿಯೋ

Last Updated : Jun 11, 2021, 12:35 PM IST

ABOUT THE AUTHOR

...view details