ಬೆಂಗಳೂರು: ಭಾರತ - ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ 20 ಭಾರತೀಯ ಯೋಧರಿಗೆ ಕಾಂಗ್ರೆಸ್ ಇಂದು ಶೃದ್ಧಾಂಜಲಿ ಸಲ್ಲಿಸಲಿದೆ.
ಕಾಂಗ್ರೆಸ್ನಿಂದ ಹುತಾತ್ಮ ಸೈನಿಕರಿಗೆ ನಾಳೆ ಶ್ರದ್ಧಾಂಜಲಿ: ಕೇಂದ್ರದ ವಿರುದ್ಧ ಮೌನ ಧರಣಿ
ಲಡಾಕ್ನ ಗಾಲ್ವಾನ್ ನದಿ ಕಣಿವೆಯ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷ ಮತ್ತು ಭಾರತ ಯೋಧರ ಸಾವು ಖಂಡಿಸಿ ನಾಳೆ ರಾಜ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ.
ಗಾಂಧಿ ಪ್ರತಿಮೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಮೌನ ಧರಣಿ ನಡೆಸಲು ತೀರ್ಮಾನಿಸಲಾಗಿದೆ.
'ಶಹೀದೊಂಕೊ ಸಲಾಂ ದಿವಸ' ಹೆಸರಿನಲ್ಲಿ ನಗರದ ರೇಸ್ಕೋರ್ಸ್ ರಸ್ತೆಯ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಮುಂಭಾಗ ನಾಳೆ ಬೆಳಗ್ಗೆ 11 ರಿಂದ 12ರವರೆಗೆ ಈ ಧರಣಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಡಿಕೆಶಿ ಸೂಚನೆ ನೀಡಿದ್ದಾರೆ.