ಬೆಂಗಳೂರು:ಶಾಸಕ ಬೈರತಿ ಸುರೇಶ್ ಇಂದು ಹೆಬ್ಬಾಳದಲ್ಲಿ ಹಮ್ಮಿಕೊಂಡಿದ್ದ ದಿನಸಿ ವಿತರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಡವರಿಗೆ ದಿನಸಿ, ಆಹಾರ ಸಾಮಗ್ರಿ ವಿತರಿಸಿದರು.
ಹೆಬ್ಬಾಳದಲ್ಲಿ ಬಡವರಿಗೆ ದಿನಸಿ ವಿತರಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ - Congress President DK Shivakumar distributed free ration
ನಗರದ ವಿವಿಧೆಡೆ ಪಕ್ಷದ ನಾಯಕರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಉಚಿತವಾಗಿ ದಿನಸಿ, ಆಹಾರ ಸಾಮಗ್ರಿ, ಊಟ, ಉಪಹಾರ ವಿತರಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ. ಊಟವನ್ನು ದಿನಕ್ಕೆ ಎರಡು ಹೊತ್ತು ವಿತರಿಸುತ್ತಿದ್ದಾರೆ.
ಹೆಬ್ಬಾಳದಲ್ಲಿ ಬಡಜನರಿಗೆ ಉಚಿತ ರೇಷನ್ ವಿತರಿಸಿದ ಡಿಕೆಶಿ
ಪಕ್ಷದ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಿ ಬಡವರು ಹಾಗೂ ಕಾರ್ಮಿಕರ ಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿತ್ತು. ದಿನಸಿ ಪಡೆಯಲು ನೂರಾರು ಮಂದಿ ಏಕಕಾಲಕ್ಕೆ ಆಗಮಿಸಿದ ಪರಿಣಾಮ ಗುಂಪುಗೂಡಿದ ವಾತಾವರಣ ಗೋಚರಿಸಿತು. ಆಯೋಜಕರು ಎಷ್ಟೇ ಪ್ರಯತ್ನ ಪಟ್ಟರೂ ಜನ ಅಂತರ ಕಾಪಾಡಿಕೊಳ್ಳಲಿಲ್ಲ.
ಕೋಲಾರಕ್ಕೆ ಪ್ರಯಾಣ:ಈ ಕಾರ್ಯಕ್ರಮ ಮುಗಿದ ಬಳಿಕ ಡಿಕೆಶಿ ಕೋಲಾರದ ಮಾಲೂರಿನತ್ತ ಪ್ರಯಾಣ ಬೆಳೆಸಿದರು. ಅಲ್ಲಿ ಬಡವರಿಗೆ ಆಹಾರ ಪದಾರ್ಥ ಹಾಗೂ ತರಕಾರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.