ಆನೇಕಲ್:ಕಾರ್ಮಿಕರ ಅನುಕೂಲಕ್ಕಾಗಿ ಸ್ವತಂತ್ರ ಪೂರ್ವ 1946 ರಲ್ಲೇ ಫ್ಯಾಕ್ಟರಿ ಆ್ಯಕ್ಟ್ ಬಂದಿದ್ದರೂ ಕಾರ್ಮಿಕರಿಗೆ 8 ತಾಸು ಮಾತ್ರ ಕೆಲಸ ಮಾಡಬೇಕೆನ್ನುವ ಕಾನೂನು ತಂದಿದ್ದು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್. ಅವರನ್ನು ಬೆಂಬಲಿಸಿದ್ದು, ಪಂಡಿತ ಜವಾಹರ್ ಲಾಲ್ ನಹೆರು. ಆದರೆ ಮೋದಿ ಸರ್ಕಾರ ಬಂದ ಮೇಲೆ ಕಾರ್ಮಿಕರ ಕಾನೂನುಗಳನ್ನು ಹಳ್ಳ ಹಿಡಿಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಇಂದು ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗ ಕಾಂಗ್ರೆಸ್ ನಡೆ ಕಾರ್ಮಿಕರ ಕಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕರುಗಳಿಗಾಗಿ ಈ ಹಿಂದೆ 49 ಕಾನೂನುಗಳಿದ್ದವು. ಆದರೆ ಬಿಜೆಪಿ ಅದನ್ನೆಲ್ಲಾ ತೆಗೆದಾಕಿ ನಾಲ್ಕು ಕೋಡಿನಲ್ಲಿ 29ಕ್ಕೆ ಇಳಿಸಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಲೇಬರ್ ಕಾನೂನು, ರೈತರ ಕಾನೂನು ಐದೇ ನಿಮಿಷದಲ್ಲಿ ಪಾಸ್ ಆಗುತ್ತಿದೆ. ಇವತ್ತು ಈ ದೇಶದ ಯುವಕರನ್ನು ಯಾರಾದರೂ ಹಾಳು ಮಾಡ್ತಿದಾರೆ ಅಂದ್ರೆ ಅದು ಮೋದಿ ಎಂದು ದೂರಿದರು.
ಕಾರ್ಮಿಕರಿಗೆ 8 ತಾಸು ಮಾತ್ರ ಕೆಲಸ, ಕಾನೂನು ತಂದಿದ್ದು ಡಾ ಅಂಬೇಡ್ಕರ್ ನೋಡ್ತಾ ಇರಿ, ನಿಮ್ಮ ತಾಳ್ಮೆ ಕಾರಣದಿಂದಾಗಿಯೇ ದೇಶದಲ್ಲಿ ಡಿಕ್ಟೇಕ್ಟರ್ ಶಿಪ್ ನಡೆಯುತ್ತಿದೆ. ಸಬ್ ಚಲ್ತಾ ಹೈ ಅನ್ನೋ ಕಾರಣ ನಿಧಾನವಾಗಿ ಎಲ್ಲಾ ಬದಲಾವಣೆ ಮಾಡ್ತಾರೆ. 90 ಕೋಟಿ ಜನರಲ್ಲಿ 45 ಕೋಟಿ ಜನರಿಗೆ ಕೆಲಸ ಇಲ್ಲ. ಇದು ದೇಶಕ್ಕೆ ಮೋದಿಯ ಕೊಡುಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ನಡೆದಿರುವ ಅಕ್ರಮಗಳನ್ನು ಮುಚ್ಚಿ ಹಾಕಲು ಕೊರೊನಾ ನಾಲ್ಕನೇ ಅಲೆ ನೆಪದಲ್ಲಿ ಭಯ ಮೂಡಿಸುತ್ತಿದ್ದಾರೆ. ಪ್ರಧಾನಮಂತ್ರಿ ಈ ಹಿಂದೆ ಹೇಳಿದಂತೆ ತಟ್ಟೆ ಹೊಡೆಯಿರಿ, ಚಪ್ಪಾಳೆ ಹೊಡೆಯಿರಿ ಅಂತ ಯಾಕೆ ಹೇಳ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ನೈತಿಕ ಪೊಲೀಸ್ ಗಿರಿ ಬಗ್ಗೆ ಯಾಕೆ ತುಟಿ ಬಿಚ್ಚಿತ್ತಿಲ್ಲ ಎಂದು ಪ್ರಶ್ನಿಸಿದರು.
ಪಿಎಸ್ಐ ನೇಮಕಾತಿ ನಡೆಯುವ ಸಂಸ್ಥೆಗಳ ಹುದ್ದೆಗೆ ಕೋಟಿ ಕೋಟಿ ಹಣ ನೀಡಿ ನೇಮಕಾತಿ ಮಾಡಲಾಗಿದೆ ಎಂದು ಬಿಜೆಪಿ ಪಕ್ಷದ ಯತ್ನಾಳ್ ಆರೋಪಿಸಿದ್ದಾರೆ. ಹಾಗಾಗಿ ಹಾಲಿ ಹೈ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಡಿ ಕೆ ಶಿವಕುಮಾರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲೂ ಕಲ್ಲಿದ್ದಲು ಕೊರತೆಯ ತೂಗುಗತ್ತಿ: ಯರಮರಸ್ ಉಷ್ಣ ಸ್ಥಾವರ ಕಾರ್ಯಸ್ಥಗಿತ; ಸದ್ಯ ಹೀಗಿದೆ ಸ್ಥಿತಿಗತಿ