ಕರ್ನಾಟಕ

karnataka

ETV Bharat / city

ಕಾಂಗ್ರೆಸ್​ ಮುಕ್ತಗೊಳಿಸಿ, ಅದು ದೇಶಕ್ಕೆ ಮಾರಕ.. ಸಾಧನೆ ಮಾತಾಗಲಿ, ಮಾತಾಡೋದೆ ಸಾಧನೆ ಅಲ್ಲ- ಬಿಎಸ್​ವೈ - ಪ್ರಧಾನಿ ನರೇಂದ್ರ ಮೋದಿ

ಹಳ್ಳಿಗಳಲ್ಲಿ ಕೆಲಸ ಮಾಡಿ ಯುವ ಮೋರ್ಚಾ ಗಟ್ಟಿಗೊಳಿಸಬೇಕಿದೆ. ಪರಿಶಿಷ್ಟ ಜಾತಿ, ಪಂಗಡದವರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಮತದಾರರು ನಮ್ಮ ಪ್ರಭುಗಳು. ಅವರ ಆಶಯದಿಂದ ನಾವು ಇಲ್ಲಿಗೆ ಬಂದಿದ್ದೇವೆ. ಅವರ ಋಣ ತೀರಿಸಬೇಕು..

Janasewaka closing conference
ಜನಸೇವಕ ಸಮಾರೋಪ ಸಮಾವೇಶ

By

Published : Jan 13, 2021, 4:38 PM IST

ಬೆಂಗಳೂರು :ದೇಶದಲ್ಲಿ ಕಾಂಗ್ರೆಸ್ ಮುಕ್ತವಾಗಬೇಕು. ಕಾಂಗ್ರೆಸ್ ದೇಶಕ್ಕೆ ಮಾರಕ ಎಂದು ಅರಮನೆ ಮೈದಾನದಲ್ಲಿ ನಡೆದ ಜನಸೇವಕ ಸಮಾರೋಪ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕಿಡಿಕಾರಿದರು.

ಮಹಾತ್ಮ ಗಾಂಧಿ ಅವರ ಕನಸು ನನಸು ಮಾಡಲು ಇಲ್ಲಿ ಬಂದಿದ್ದೇವೆ. ಜಗತ್ತು ಮೆಚ್ಚುವ ಮಹಾನಾಯಕ ಮೋದಿ. ದೇಶವಿದೇಶ ಸುತ್ತಿ ಬಂದರೂ ಅವರು ವಿಶ್ರಾಂತಿ ಪಡೆದಿಲ್ಲ. ಅವರ ಪರಿಶ್ರಮ ಬಹಳ ದೊಡ್ಡದು. ಅವರ ಹೋರಾಟದ ಮುಂದೆ ನಮ್ಮದು ಏನೂ ಇಲ್ಲ. ಆಯ್ಕೆಯಾಗಿರುವ ಸದಸ್ಯರು ನಿಮ್ಮ ಊರಿಗೆ ತೆರಳಿ ಹಿರಿಯರ ಆಶೀರ್ವಾದ ಪಡೆಯಿರಿ. ಪಕ್ಷ ಸಂಘಟನೆಗೆ ಅವರ ಸಹಕಾರ ಕೇಳಿ ಎಂದು ಗ್ರಾಪಂ ಸದಸ್ಯರಿಗೆ ಕರೆ ನೀಡಿದರು.

ಇದನ್ನೂ ಓದಿ...ಅವಕಾಶ ಕೈ ತಪ್ಪಿದ್ದಕ್ಕೆ ಅಸಮಾಧಾನ: ಹೈಕಮಾಂಡ್​​ಗೆ ದೂರು ನೀಡಲು ಮುಂದಾದ ಬೆಲ್ಲದ್​!

ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಯಾವ ರೀತಿ ಪಕ್ಷ ಸಂಘಟನೆ ಮಾಡುತ್ತಿದ್ದಾರೋ ಅದೇ ರೀತಿ ಪ್ರತಿಯೊಬ್ಬರು ಪಕ್ಷ ಕಟ್ಟುವ ಕೆಲಸ ಮಾಡಬೇಕು. ಚಿಹ್ನೆ ಇಲ್ಲದೆ ಗೆದ್ದ ನಾವು, ಜಿಲ್ಲಾ ಪಂಚಾಯತ್ ಚುನಾವಣೆ ಚಿಹ್ನೆ ಮೇಲೆ ಗೆಲ್ಲಬೇಕು. ಎಲ್ಲಿಗೆ ಕರೆದ್ರೂ ಬರುತ್ತೇನೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಒಂದು ಸಂದೇಶ ನೀಡಬೇಕಿದೆ ಎಂದರು.

ಹಳ್ಳಿಗಳಲ್ಲಿ ಕೆಲಸ ಮಾಡಿ ಯುವ ಮೋರ್ಚಾ ಗಟ್ಟಿಗೊಳಿಸಬೇಕಿದೆ. ಪರಿಶಿಷ್ಟ ಜಾತಿ, ಪಂಗಡದವರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಮತದಾರರು ನಮ್ಮ ಪ್ರಭುಗಳು. ಅವರ ಆಶಯದಿಂದ ನಾವು ಇಲ್ಲಿಗೆ ಬಂದಿದ್ದೇವೆ. ಅವರ ಋಣ ತೀರಿಸಬೇಕು ಎಂದು ತಿಳಿಸಿದರು.

ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಮುಂದಿನ ದಿನಗಳಲ್ಲಿ ನಮ್ಮೆಲ್ಲರ ಶ್ರಮದಿಂದ 150ಕ್ಕೂ ಹೆಚ್ಚು ಸೀಟು ಗೆಲ್ಲಬೇಕಿದೆ. ಸಾಧನೆ ಮಾತಾಗಬೇಕು, ಮಾತು ಸಾಧನೆಯಾಗಬಾರದು. ಇದನ್ನ ಅಳವಡಿಸಿಕೊಂಡರೆ, ಪ್ರಧಾನಿ ಮೋದಿ ಆಶಯ ಪೂರೈಸಲಿದೆ ಎಂದರು.

ABOUT THE AUTHOR

...view details