ಕರ್ನಾಟಕ

karnataka

ETV Bharat / city

Video: ಪ್ರತಿಭಟನೆ ವೇಳೆ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್ ನಾಯಕರು! - ಕಾಂಗ್ರೆಸ್ ಪ್ರತಿಭಟನೆ

ತೈಲ ಹಾಗೂ ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ನಾಯಕರು 'ಎತ್ತಿನಗಾಡಿ ಚಲೋ ಪ್ರತಿಭಟನೆ' ನಡೆಸುತ್ತಿದ್ದು, ಎತ್ತಿನ ಗಾಡಿಯ ಹಿಂಭಾರ ಹೆಚ್ಚಾದ ಪರಿಣಾಮ ಕೆಳಗೆ ಬಿದ್ದಿದ್ದಾರೆ.

ಪ್ರತಿಭಟನೆ ವೇಳೆ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್ ನಾಯಕರು
ಪ್ರತಿಭಟನೆ ವೇಳೆ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್ ನಾಯಕರು

By

Published : Sep 13, 2021, 1:15 PM IST

ಬೆಂಗಳೂರು: ಒಂದೇ ಎತ್ತಿನ ಗಾಡಿ ಮೇಲೆ ನಿಂತು ವಿಧಾನಸೌಧ ಪ್ರವೇಶ ಮಾಡಿದ್ದ ಕಾಂಗ್ರೆಸ್ ನಾಯಕರು ಗಾಡಿಯಲ್ಲಿ ಹಿಂಭಾರ ಹೆಚ್ಚಾದ ಪರಿಣಾಮ ಕೆಳಗೆ ಬಿದ್ದಿದ್ದು, ವಿಡಿಯೋ ವೈರಲ್​ ಆಗುತ್ತಿದೆ.

ಪ್ರತಿಭಟನೆ ವೇಳೆ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್ ನಾಯಕರು

ಇಂದಿನಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ತೈಲ ಹಾಗೂ ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ನಾಯಕರು 'ಎತ್ತಿನಗಾಡಿ ಚಲೋ ಪ್ರತಿಭಟನೆ' ನಡೆಸಿದರು. ಪ್ರತಿಭಟನೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಮಾಜಿ ಗೃಹ ಸಚಿವ ಎಂ‌.ಬಿ. ಪಾಟೀಲ್, ಪರಿಷತ್ ಸದಸ್ಯ ನಜಿರ್ ಅಹಮದ್ ಸಾಥ್ ಹಾಗೂ ಕೆಲ ಶಾಸಕರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ತೈಲ, ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ಮುಖಂಡರ ಎತ್ತಿನಗಾಡಿ ಚಲೋ

ಇವೆರಲ್ಲ ಒಂದೇ ಎತ್ತಿನ ಗಾಡಿಯಲ್ಲಿ ವಿಧಾನಸೌಧ ಪ್ರವೇಶ ಮಾಡಿದ್ದು, ಗಾಡಿಯ ಹಿಂಭಾರ ಜಾಸ್ತಿಯಾಗಿ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಸೇರಿದಂತೆ ಕೆಲವರು ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಕಾರ್ಯಕರ್ತರು ಮೇಲಕ್ಕೆತ್ತಿದರು.

ABOUT THE AUTHOR

...view details