ಕರ್ನಾಟಕ

karnataka

ETV Bharat / city

ಪಿಎಸ್ಐ ಅಕ್ರಮದಲ್ಲಿ ಅಶ್ವತ್ಥ್​ ನಾರಾಯಣ ಸಹೋದರ ಭಾಗಿ ಆರೋಪ : ಸಚಿವರ ರಾಜೀನಾಮೆಗೆ ಉಗ್ರಪ್ಪ ಆಗ್ರಹ

ಪಿಎಸ್​ಐ ನೇಮಕಾತಿಯಲ್ಲಿ ನಡೆದ ಅಕ್ರಮದಲ್ಲಿ ಸಚಿವ ಡಾ. ಅಶ್ವತ್ಥ್​ ನಾರಾಯಣ ಅವರ ಸಹೋದರನ ಹೆಸರೂ ಕೇಳಿ ಬಂದಿದ್ದು, ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಸಿಎಂ ಅವರನ್ನು ವಜಾ ಮಾಡಬೇಕು ಎಂದು ಕಾಂಗ್ರೆಸ್​ ಮುಖಂಡ ಉಗ್ರಪ್ಪ ಆಗ್ರಹಿಸಿದ್ದಾರೆ..

congress-leader
ಉಗ್ರಪ್ಪ ಆಗ್ರಹ

By

Published : May 2, 2022, 3:47 PM IST

Updated : May 2, 2022, 10:45 PM IST

ಬೆಂಗಳೂರು :ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮದಲ್ಲಿ ಸಚಿವ ಡಾ.ಸಿ ಎಸ್​ ಅಶ್ವತ್ಥ್​ ನಾರಾಯಣ ಅವರ ಸಹೋದರ ಭಾಗಿಯಾಗಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಒತ್ತಾಯಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವರ ಸಹೋದರ ಸತೀಶ್ ಎಂಬಾತ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಪಿಎಸ್ಐ ನೇಮಕಾತಿಯ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. 85 ಲಕ್ಷ ರೂಪಾಯಿಯನ್ನು ಒಬ್ಬ ಅಭ್ಯರ್ಥಿಯಿಂದ ಪಡೆದಿರುವ ಆರೋಪ ಇದೆ. ಮಾಗಡಿ ಜಿಲ್ಲೆಯಿಂದಲೇ 4-5 ಅಭ್ಯರ್ಥಿಗಳು ಅತಿ ಹೆಚ್ಚು ಅಂಕ ಪಡೆದು ಆಯ್ಕೆಯಾಗಿದ್ದು, ಇಲ್ಲಿ ಅಕ್ರಮ ನಡೆದಿರುವ ಅನುಮಾನ ಬಲವಾಗಿದೆ ಎಂದು ಆರೋಪಿಸಿದರು.

ಸಚಿವ ಅಶ್ವತ್ಥ್​ ನಾರಾಯಣ ರಾಜೀನಾಮೆಗೆ ಉಗ್ರಪ್ಪ ಆಗ್ರಹ

ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಚಿವ ಡಾ.ಅಶ್ವತ್ಥ್​ ನಾರಾಯಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು. ಒಂದೊಮ್ಮೆ ಸಚಿವರು ರಾಜೀನಾಮೆ ಸಲ್ಲಿಸದಿದ್ದರೆ ಮುಖ್ಯಮಂತ್ರಿಗಳು ಸಚಿವರನ್ನು ವಜಾಗೊಳಿಸಬೇಕು. ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಓದಿ:ಹಗರಣ ಮಾಡುವ, ಶಾಂತಿ ಕದಡುವ RSS, ಭಜರಂಗ ದಳದ ಮೇಲೆ ನಿಮ್ಮ ಹಾರ್ಡ್‌ ಅಸ್ತ್ರ ಬಳಸಿ.. ಸಿಎಂಗೆ ತಿವಿದ ಹೆಚ್.ವಿಶ್ವನಾಥ್

Last Updated : May 2, 2022, 10:45 PM IST

For All Latest Updates

TAGGED:

ABOUT THE AUTHOR

...view details