ಬೆಂಗಳೂರು :ಮೂರು ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಿತು. ಒಳ್ಳೆಯ ಸ್ಪರ್ಧೆ ಒಡ್ಡುವ ಬಗ್ಗೆ ಚರ್ಚೆಯಾಯ್ತು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ದಿನೇಶ್ ಗುಂಡೂರಾವ್, ಕೆಪಿಸಿಸಿ ಮಾಜಿ ಅಧ್ಯಕ್ಷ ಕೆಪಿಸಿಸಿ ಕಚೇರಿಯಲ್ಲಿ ನಡೆದ ಹಿರಿಯ ಕಾಂಗ್ರೆಸ್ ನಾಯಕರ ಚರ್ಚೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ತಲೆ ತಗ್ಗಿಸುವ ರೀತಿ ಕೆಲಸ ಮಾಡ್ತಿದೆ. ಅವರಿಗೆ ಯಾವುದೇ ಕಾರ್ಯಕ್ರಮವಿಲ್ಲ. ದುಡ್ಡು ಮಾಡಬೇಕು, ಹಣ ಚೆಲ್ಲಬೇಕು, ಚುನಾವಣೆ ಗೆಲ್ಲಬೇಕು.
ಸಿಎಂ ಆಡಿಯೋ ರೆಕಾರ್ಡಿಂಗ್ ಹೊರ ಬಂದಿದೆ. ಇವತ್ತು ಬೇರೆ ಬೇರೆ ಸಿಡಿಗಳು ಬರ್ತಿವೆ. ರಾಜ್ಯ ಅಸ್ತವ್ಯಸ್ತವಾಗಿದೆ. ಅದಾನಿಯವರನ್ನ ಶ್ರೀಮಂತರನ್ನಾಗಿ ಮಾಡಲಾಗಿದೆ. ಅಂಬಾನಿ ಹಣವೂ ಹೆಚ್ಚಾಗಿದೆ. ಇದೆಲ್ಲವನ್ನೂ ಜನ ನೋಡ್ತಿದ್ದಾರೆ ಎಂದರು.
ರಾಜ್ಯದಲ್ಲಿ ಸರ್ಕಾರ ಇದ್ಯೋ ಇಲ್ಲೋ ಗೊತ್ತಿಲ್ಲ. ಡಿಪಾರ್ಟ್ಮೆಂಟ್ ಲೂಟಿ ಮಾಡ್ತಿದ್ದಾರೆ. ಟ್ರಾನ್ಸ್ಫರ್ ದಂಧೆ ನಡೆಯುತ್ತಿದೆ. ನಾವು ಉತ್ತಮ ಅಭ್ಯರ್ಥಿ ಹಾಕಿದ್ದೇವೆ, ಸುಲಭವಾಗಿ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು.
ಗೆಲುವು ನಿಶ್ಚಿತ :ತಮಿಳುನಾಡು ವಿಧಾನಸಭೆ ಚುನಾವಣೆ ಕುರಿತು ಮಾತನಾಡಿ, ಬಿಜೆಪಿ ಜೊತೆ ಹೋಗಲು ಎಐಎಡಿಎಂಕೆಗೂ ಇಷ್ಟವಿಲ್ಲ. ಆದರೂ ಒತ್ತಾಯ ಮಾಡಿ ಒಪ್ಪಂದ ಮಾಡಿ ಕೊಂಡಿದ್ದಾರೆ. ಅವರ ಜೊತೆ ಬಿಜೆಪಿ ಒಪ್ಪಂದ ಮಾಡಿಕೊಂಡಿದೆ.
ಯಾರು ವಿರುದ್ಧವಾಗಿ ಮಾತನಾಡ್ತಾರೆ ಅವರ ಮೇಲೆ ರೇಡ್ ಮಾಡಿಸೋದು. ಮೀಡಿಯಾಗಳ ಮೇಲೂ ಹಿಡಿತ ಸಾಧಿಸುವುದು. ಅಧಿಕಾರ ಹಿಡಿಯೋಕೆ ಎಲ್ಲಾ ಕುತಂತ್ರಗಳನ್ನ ಮಾಡಿದ್ದಾರೆ ಎಂದು ದೂರಿದರು.