ಬೆಂಗಳೂರು :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲಸಿಡಿ ಪ್ರಕರಣ ಸಂಬಂಧ ಯುವತಿ ಕೊನೆಗೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಯುವತಿಯ ನೈತಿಕ ಬೆಂಬಲಕ್ಕೆ ಮೊಹಮ್ಮದ್ ನಲಪಾಡ್ ಹ್ಯಾರಿಸ್ ನ್ಯಾಯಾಲಯದ ಬಳಿ ಬಂದಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಸಂತ್ರಸ್ತೆಗೆ ನೈತಿಕ ಬೆಂಬಲ ನೀಡಲು ಇಲ್ಲಿಗೆ ಬಂದಿದ್ದೇವೆ ಎಂದರು. ಇನ್ನು, ಸಿಡಿ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಅವರದು ತಪ್ಪಿಲ್ಲ. ಯುವತಿ ಪೋಷಕರ ಹೇಳಿಕೆ ಹಿಂದೆ ರಮೇಶ್ ಜಾರಕಿಹೊಳಿ ಕೈವಾಡವಿದೆ. ತಪ್ಪು ಮಾಡಿದಾಗ ನಾನೇ ಮಾಡಿದ್ದು ಅಂತ ಯಾರೂ ಹೇಳಲ್ಲ ಎಂದರು.