ಬೆಂಗಳೂರು :ಈಗ ಕರ್ನಾಟಕದಲ್ಲಿರುವ ಪರಿಸ್ಥಿತಿಗೆ ಜೆಡಿಎಸ್ ಅಥವಾ ಕುಮಾರಸ್ವಾಮಿ ಕಾರಣ ಅಲ್ಲ. ಕಾಂಗ್ರೆಸ್ ಕಾರಣ. ರಾಜ್ಯದ ಜನ ಇಂದಿನ ಕೆಟ್ಟ ಪರಿಸ್ಥಿತಿ ಅನುಭವಿಸಲು ಒಂದು ಕಡೆ ಕಾಗ್ರೆಸ್ ಕಾರಣವಾದರೆ ಮತ್ತೊಂದು ಕಡೆ ಬಿಜೆಪಿ ಕಾರಣ. ಹಿಂದೂ ಯುವಕರಿಗೆ ಕೈಮುಗಿದು ಹೇಳುತ್ತೇನೆ ಶಾಂತಿಯ ತೋಟವಾಗಿರುವ ರಾಜ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಹೆಚ್‌ಡಿಕೆ ಸುದ್ದಿಗಾರರೊಂದಿಗೆ ಮಾತನಾಡಿರುವುದು.. ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾರು ಶಾಶ್ವತ ಅಲ್ಲ. ನಾಳೆಯ ಯುವಜನಾಂಗಕ್ಕೆ ಶಾಂತಿಯತೋಟವನ್ನೇ ಹಸ್ತಾಂತರಿಸಿ. ಕೆಟ್ಟ ವ್ಯಕ್ತಿಗಳನ್ನು ಬಹಿಷ್ಕಾರ ಮಾಡಿ. ಇಲ್ಲದೇ ಇದ್ದರೆ ಭವಿಷ್ಯದಲ್ಲಿ ಒಳ್ಳೆಯ ದಿನಗಳನ್ನು ಕಾಣಲು ಸಾಧ್ಯವಿಲ್ಲ.
ದೇವೇಗೌಡರು ವಿವಾದ ಬಗೆಹರಿಸಿದರು : ಈದ್ಗಾ ಮೈದಾನದ ಹೆಸರಿನಲ್ಲಿ ಹಲವಾರು ಮಕ್ಕಳನ್ನು ಬಲಿ ತೆಗೆದುಕೊಂಡಿದ್ದೀರಿ. ದೇವೇಗೌಡರು ಮುಖ್ಯಮಂತ್ರಿ ಆಗುವವರೆಗೆ ಪ್ರತಿವರ್ಷ ಒಬ್ಬರು ಅಥವಾ ಇಬ್ಬರನ್ನು ಬಲಿ ಪಡೆಯುತ್ತಾ ಬಂದಿದ್ದೀರಿ. ಈದ್ಗಾ ವಿಚಾರವನ್ನು ದೇವೇಗೌಡರು ಸರಿ ಮಾಡಿದ್ರು ಎಂದು ಹೇಳಿದರು.
ಈ ಸರ್ಕಾರ ಬರಲು ಕಾಂಗ್ರೆಸ್ ಕಾರಣ : ಬಿಜೆಪಿ ಸರ್ಕಾರ ಬರಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ನವರು ಭಾಷಣದಲ್ಲಿ ಬಿಜೆಪಿಯನ್ನು ಅನೈತಿಕ ಸರ್ಕಾರ ಎಂದು ಹೇಳುತ್ತಾರೆ. ಆದರೆ, ಈ ಅನೈತಿಕ ಸರ್ಕಾರ ಅಧಿಕಾರಕ್ಕೆ ಬರಲು ಯಾರು ಕಾರಣಾ?. ಈ ಕಾಂಗ್ರೆಸ್ನವರೇ ಕಾರಣ. ನಮ್ಮ ಮನೆ ಬಾಗಿಲಿಗೆ ಬಂದು ಸಿಎಂ ಮಾಡಿದ್ರಿ. ಇಂತಹ ಪರಿಸ್ಥಿತಿ ಉದ್ಭವ ಆಗಲು ಒಂದು ಕಡೆ ಕಾಂಗ್ರೆಸ್, ಇನ್ನೊಂದು ಕಡೆ ಬಿಜೆಪಿ ಕಾರಣವಾಗಿದೆ. ಕನ್ನಡಿಗರೇ ದಾರಿ ತಪ್ಪಬೇಡಿ ಎಂದು ಟೀಕಿಸಿದರು.
ಇದನ್ನೂ ಓದಿ:ಚುನಾವಣೆಗಳು 'ಜನಾದೇಶ'ವಾಗುವ ಬದಲು 'ಧನಾದೇಶ'ವಾಗುತ್ತಿವೆ: ಸ್ಪೀಕರ್ ಕಾಗೇರಿ
ನೀವುಆಸ್ತಿ ಹೊಡೆಯುವವರು :ಹಿಂದೂ ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತೀರಾ? ದೇವಸ್ಥಾನ ಕಟ್ಟುವರು ಓಬಿಸಿ, ದಲಿತರು, ದೇವಸ್ಥಾನದ ಒಳಗೆ ಕೂತುಕೊಂಡು ಆಸ್ತಿ ಹೊಡೆಯುವವರು ನೀವುಗಳು. ನೀವು ಮಜಾ ಮಾಡುವವರು.
ಈ ರಾಜ್ಯದಲ್ಲಿ ಸರ್ಕಾರ ಇದ್ಯಾ, ಏನು ಮಾಡ್ತಿದೆ ಸರ್ಕಾರ? ಸಿಎಂ ವಿರುದ್ಧ ಮಾತಾಡಿದ್ದಕ್ಕೆ ಒಬ್ಬನನ್ನು ಅರೆಸ್ಟ್ ಮಾಡಿದ್ರಿ. ಪ್ರಚೋದನೆ ಮಾಡುವವರನ್ನು ಅರೆಸ್ಟ್ ಮಾಡಿ. ಈ ರೀತಿಯಲ್ಲಿ ಪ್ರಚೋದನೆ ಮಾಡಿದ್ರೆ ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಅವರನ್ನು ಅರೆಸ್ಟ್ ಮಾಡಿ ಎಂದು ಆಗ್ರಹಿಸಿದರು.