ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ನಿರ್ವಹಣೆಗೆ ಯುವ ಕಾಂಗ್ರೆಸ್ ನಾಯಕರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.
ಓದಿ: ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದವರನ್ನು ರಕ್ಷಿಸಿದ ಯೋಧರು: ಸೈನಿಕರ ಶೌರ್ಯಕ್ಕೆ ಜನರ ಸಲಾಂ
ಯುವ ಕಾಂಗ್ರೆಸ್ ಘೋಷಿತ ಅಧ್ಯಕ್ಷ ರಕ್ಷಾ ರಾಮಯ್ಯ ಹಾಗೂ ಗೆಲುವನ್ನು ತಡೆ ಹಿಡಿದ ಹಿನ್ನೆಲೆ ಹೆಚ್ಚು ಮತ ಗಳಿಸಿಯೂ ಹಿನ್ನಡೆ ಅನುಭವಿಸಿರುವ ಮೊಹಮ್ಮದ್ ನಲಪಾಡ್ಗೆ ಯಾವುದೇ ಜವಾಬ್ದಾರಿ ನೀಡದಿರುವುದು ವಿಶೇಷವಾಗಿ ಗಮನ ಸೆಳೆದಿದೆ. ಇಬ್ಬರ ನಡುವೆ ಸಾಕಷ್ಟು ತಿಕ್ಕಾಟ ನಡೆಯುತ್ತಿದ್ದು, ಇದೇ ಜವಾಬ್ದಾರಿಯಿಂದ ಇವರು ದೂರ ಉಳಿಯುವಂತೆ ಮಾಡಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತರೆಂದೇ ಗುರುತಿಸಿಕೊಂಡಿರುವ ಮೊಹಮ್ಮದ್ ನಲಪಾಡ್ಗೆ, ಉತ್ತಮ ಸ್ಥಾನಮಾನ ಸಿಗುವ ನಿರೀಕ್ಷೆ ಹೊಂದಲಾಗಿತ್ತು. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಅವರು ಅಧ್ಯಕ್ಷ ರಕ್ಷಾ ರಾಮಯ್ಯಗಿಂತ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಪಕ್ಷದ ಹೈಕಮಾಂಡ್ ಇದಕ್ಕೆ ಮನ್ನಣೆ ನೀಡದಿರುವುದು ಸ್ಪಷ್ಟವಾಗಿದೆ. ಇನ್ನೊಂದೆಡೆ ಅಧ್ಯಕ್ಷರಾದ ಬಳಿಕವೂ ಅಷ್ಟಾಗಿ ಪಕ್ಷದ ಹಿರಿಯ ನಾಯಕರ ಜತೆ ಸಂವಹನ ಸಾಧಿಸದ, ಪಕ್ಷದ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗದ ಹಾಗೂ ಕೋವಿಡ್ ಸಂದರ್ಭದಲ್ಲಿ ಅಷ್ಟಾಗಿ ಜನರ ಬಳಿ ತೆರಳದ ಕಾರಣಕ್ಕೆ ರಕ್ಷಾ ರಾಮಯ್ಯರನ್ನೂ ಪಕ್ಷದ ಹೈಕಮಾಂಡ್ ದೂರವೇ ಇರಿಸಿದೆ.